ರಾಘವೇಂದ್ರ ಪಾಟೀಲರ ಹೊಸ ಕಾದಂಬರಿ `ಗೈರ ಸಮಜೂತಿ’ಯು ಒಂದು ಪಿಂಡಗೊಂಡ ಸಶಕ್ತ ಸಂಕಥನವಾಗಿದೆ. ಗೈರ ಸಮಝೂತಿ ಎಂದರೆ ತಪ್ಪು ಕಲ್ಪನೆ, ಭ್ರಾನ್ತಿ. ಈ ಶಬ್ದದ ಅರ್ಥದ ಪದರುಗಳು ವಿಸ್ತಾರವಾದ ಅರ್ಥವ್ಯಾಪ್ತಿಯುಳ್ಳ ಶಕ್ತಿ ಉಳ್ಳವುಗಳಾಗಿವೆ. ಸಂಸಾರದ ಸಂಚಾರಿ ಸ್ತರಗಳಲ್ಲಿ ನಾವು ನಿತ್ಯ ಅನುಭವಿಸುವ ಭವದ ನೆಲೆಗಳಲ್ಲೇ ಹಲವಾರು ಗೈರ ಸಮಜೂತಿಗಳು ನಮ್ಮ ತಿಳಿವಿನ ಹಣೆ ಬರಹಗಳನ್ನು ನಿತ್ಯವೂ ಬರೆಯುತ್ತಲೇ ಇರುತ್ತವೆ. ಇರುವದು ಒಂದು, ಆದರೆ ನಾವು ತಿಳಿಯುವದು ಇನ್ನೊಂದು – ಈ ವ್ಯೂಹವನ್ನು ಭೇದಿಸಿಕೊಂಡು ಹೋಗಿ ಇಹವನ್ನು ಗೆಲ್ಲುವದು ತೀರ ಕಷ್ಟದ ಕ್ರಿಯೆ.
ದ್ವಂದ್ವಗಳ ಸಂಘರ್ಷಗಳು ಹಾಗು ಸಂಕಟಗಳು ಈ ಕಾದಂಬರಿಯ ಸ್ಥಾಯಿ ನೆಲೆಯ ಧ್ಯಾನ ಕೇಂದ್ರವಾಗಿವೆ. ಆದರೆ ಅನುದಿನದ ಬದುಕಿನ ಸಂಚಾರಿ ನೆಲೆಯ ಹಾಸಿನಲ್ಲೇ ಈ ಎಲ್ಲ ಸಂಕಟ ಹಾಗೂ ಸಂಘರ್ಷಗಳು ಹೊಕ್ಕಾಗಿ ಹೆಣೆದುಕೊಂಡಿವೆ. ಬೆಟಗೇರಿ ಹಾಗು ಐನಾಪುರಗಳೆಂಬ ಎರಡು ಗ್ರಾಮ – ಭಾರತದ ಭಾಗಗಳೇ ಆದ ಚಿಕ್ಕ ಹಳ್ಳಿಗಳ ಎರಡು ಬ್ರಾಹ್ಮಣ ಕುಟುಂಬಗಳ ಪ್ರಾಪಂಚಿಕ ಚೌಕಟ್ಟಿನಲ್ಲಿ ನಡೆಯುವ ಅನೇಕ ಗೈರ ಸಮಜೂತಿಗಳು ಅನೇಕ ಸಾಂಸಾರಿಕ, ಸಾಮಾಜಿಕ ವಿಘಟನೆಗಳನ್ನು ತರುತ್ತವೆ. ಜೀವಗಳನ್ನು ದುಃಖದ ಕಡಲಿನಲ್ಲಿ ಮುಳುಗಿಸುತ್ತವೆ. ಇನ್ನು ಮುಂದಿನ ಬದುಕು ಹೇಗೆ ರೂಪುಗೊಂಡೀತು ಎಂಬ ತಳಮಳವನ್ನು ಸೃಷ್ಟಿಸುತ್ತವೆ.
ಈ ಕಾಲದ ಧರ್ಮ, ತತ್ವ, ಸಮಾಜ, ರಾಜಕಾರಣ, ಕುಟುಂಬ, ಎಲ್ಲ ವಲಯದಲ್ಲೂ ತುಂಬಿರುವ ಹಲವು ಸ್ತರಗಳ ಗೈರ – ಸಮಜೂತಿಗಳ ಒಂದು ಕಾಲೋಚಿತ ಶೋಭಾಯಾತ್ರೆ ಈ ಕಾದಂಬರಿಯ ಉದ್ದಕ್ಕೂ ನಡೆಯುತ್ತದೆ. ಧರ್ಮವು ಗಣತಾಂತ್ರಿಕವೂ ಆಗಬೇಕು ಹಾಗೂ ಅದರ ಗುಣೀಭೂತ ಪರಾಕರ್ಷಣೆಯೂ ಶಿಥಿಲಗೊಳ್ಳಬಾರದು ಎನ್ನುವ ಒಂದು ಆನುಭಾವಿಕ ಪ್ರಾತ್ಯಕ್ಷಿಕೆ ಇಲ್ಲಿನ ಹಲವು ಘಟನೆಗಳ ಆಕೃತಿಗಳ ಒಳಗೇ ಬಹಳ ಸೂಕ್ಷ್ಮವಾಗಿ ನಡೆಯುತ್ತದೆ.
-40%
Ebook
ಗೈರ ಸಮಜೂತಿ
Author: Raghavendra Patil
Original price was: ₹450.00.₹270.00Current price is: ₹270.00.
About this Ebook
Information
Additional information
Author | |
---|---|
Publisher | |
Book Format | Ebook |
Language | Kannada |
ISBN | 978-93-87257-67-2 |
Pages | 456 |
Year Published | 2020 |
Category |
Reviews
Only logged in customers who have purchased this product may leave a review.
Reviews
There are no reviews yet.