ಪ್ರಸ್ತುತ ಬರಹಗಳನ್ನು ಯಾವ ಪ್ರಕಾರಕ್ಕೆ ಸೇರಿಸಿಕೊಂಡು ಓದಬೇಕು ಎಂದು ಚಿಂತಿಸುವ ಓದುಗರರಿಗೆ, ಈ ಬರಹಗಳನ್ನು ಯಾವ ಪ್ರಕಾರಕ್ಕೆ ಸೇರಿಸದೆ ಹೇಗಿವೆಯೋ ಹಾಗೆಯೇ ಸ್ವೀಕರಿಸಬೇಕೆಂದು ಲೇಖಕಿಯ ಬಿನ್ನಹ. ಈ ಬರಹಗಳಲ್ಲಿ ಯಾವುದೇ ತರಹದ ಕೃತ್ರಿಮತೆಯಿಲ್ಲ ಅಲ್ಲದೇ ಓದುಗನ ದಿನನಿತ್ಯದ ಅನುಭವ ಪ್ರಪಂಚಕ್ಕೆ ಹತ್ತಿರವಾಗಿವೆ. ಪ್ರಸ್ತುತ ಕಾಲದ ಜೀವನಶೈಲಿ, ವ್ಯಕ್ತಿತ್ವದ ಸ್ವರೂಪ ಇವುಗಳ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಾರೆ, ಸೂಚಿಸುತ್ತಾರೆ. ಬರಹದ ಹಲವು ಪ್ರಕಾರಗಳನ್ನು ಬೆರೆಸಿ ಬರೆಯುವದು ಒಂದು ವಿಶೇಷ ಗುಣ ಅದರಲ್ಲಿ ನಂದಿನಿಯವರು ಪಳಗಿದ್ದಾರೆ.
ಕೆಲವು ಬರಹಗಳಲ್ಲಿ ಲೇಖಕಿ ತಮ್ಮ ಬಗ್ಗೆಯೂ ಕೂಡ ತಿಳಿಸಿದ್ದಾರೆ. ಬ್ರೂನೊ, ಗೌರಿ, ಅಪ್ಪ ಇವು ಮೂರು ವ್ಯಕ್ತಿ ಚಿತ್ರದ ಬರಹಗಳು. ಇವುಗಳನ್ನು ಓದಲು ಕುಳಿತರೆ ಲೇಖಕರ ಅನುಭವ ಜಗತ್ತಿಗೆ ನಾವು ಲಗ್ಗೆಯಿಡುತ್ತೇವೆ.ಇವರ ಬರಹಗಳ ಇನ್ನೊದು ವೈಶಿಷ್ಟ್ಯವೆಂದರೆ ಸಮಕಾಲೀನ ಬದುಕನ್ನು ಬೇರೆ ಬೇರೆ ಸ್ತರಗಳಿಂದ ನೋಡುವುದು. ಬರವಣಿಗೆಗಳು ಎಲ್ಲರ ದೃಷ್ಟಿಕೋನದಿಂದಲೂ ಬದುಕನ್ನು ಬದಲಾವಣೆಯನ್ನು ನೋಡಲು ಪ್ರಯತ್ನಿಸುತ್ತದೆ. ನಂದಿನಿ ಅವರಿಗೆ ಪುಟ್ಟ ಪ್ರಪಂಚವೇ ಸಾಕು, ದಿನ ನಿತ್ಯದ ಅನುಭವಗಳೇ ಅವರಿಗೆ ಬರೆಯಲು ಸ್ಫೂರ್ತಿ. ಅವುಗಳನ್ನು ಕುರಿತು ಧ್ವನಿಪೂರ್ಣವಾಗಿ ಬರೆಯುತ್ತಾರೆ.
Reviews
There are no reviews yet.