ಕಾಸರಗೋಡಿನ ಸಂಪ್ರದಾಯಸ್ಥ ಅವಿಭಕ್ತ ಕುಟುಂಬದಿಂದ ಬಂದ ಕಕ್ಕಿಲ್ಲಾಯ ವಿದ್ಯಾರ್ಥಿ ದೆಸೆಯಲ್ಲಿದ್ದಾಗಲೇ ಕಮ್ಯುನಿಷ್ಟ್ ತ ತ್ವಗಳಿಂದ ಆಕರ್ಷಿತರಾಗಿ ಕರ್ನಾಟಕದಲ್ಲಿ ಕಮ್ಯುನಿಷ್ಟ್ ಪಾರ್ಟಿಯ ಪ್ರಮುಖ ನಾಯಕರಲ್ಲೊಬ್ಬರಾಗಿ ಬೆಳೆದರು.
ರಾಜ್ಯಸಭೆಯ ಸದಸ್ಯರಾಗಿ, ಎರಡು ಸಲ ಕರ್ನಾಟಕ ಶಾಸನ ಸಭೆಯ ಸದಸ್ಯರಾಗಿ ನಾಡಿಗೆ ಸೇವೆ ಸಲ್ಲಿಸಿರುವ ಕಕ್ಕಿಲ್ಲಾಯ ಈ ಆತ್ಮ ಕಥನದಲ್ಲಿ ತಮ್ಮ ಬದುಕು ಹೋರಾಟಗಳ ಅಪೂರ್ವ ಅನುಭವಗಳನ್ನು ಹಂಚಿಕೊಂಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಮ್ಯುನಿಷ್ಟ್ ಪಾರ್ಟಿ ಚಟುವಟಿಕೆಗಳು. ಮಂಗಳೂರಿನ ಬೀಡಿ ಕಾರ್ಮಿಕರು ಹಂಚಿನ ಕಾರ್ಖಾನೆ, ಗೇರುಬೀಜ ಕಾರ್ಖಾನೆ, ಮಜೂರ ರು ರೈತರು ತಮ್ಮ ಬದುಕನ್ನು ಸುಧಾರಿಸಿಕೊಳ್ಳ ಲು ನಡೆಸಿದ ಹಲವು ಹೋರಾಟಗಳನ್ನು ಪರಿಚಯಿಸುವ ಕೃತಿಯಾಗಿದೆ.
Reviews
There are no reviews yet.