ತನ್ನ ಹಳ್ಳಿಯಲ್ಲಿ ಶಾಲೆ ಆರಂಭಿಸಿದ ಆಕೆ, ಶಾಲೆಗೆ ಸಿಕ್ಕಿದ ಪರಿಹಾರದ ಹಣವನ್ನು ಉಪಯೋಗಿಸುವ ರೀತಿಯಲ್ಲೇ ಅವಳ ದೂರದೃಷ್ಟಿ ಪರಿಚಯವಾಗುತ್ತದೆ. ಯಾವುದೇ ಪದ ವೈಭವಗಳಿಲ್ಲದೆ ತಾನು ಕೊನೆಯಲ್ಲಿ ಸಾಧಿಸಿದ ಎತ್ತರದ ಬಗ್ಗೆ ಅಹಂಕಾರವಿಲ್ಲದ ನಿವೇದನೆಯ ಧಾಟಿಯಲ್ಲಿ ಮುಖ್ತಾರ್ ಮಾಯಿ ಕೊನೆಯ ವರೆಗೂ ಹೇಳುತ್ತಾ ಹೋಗುತ್ತಾಳೆ. ಇಂತಹ ಕೃತಿಗಳು ಜಗತ್ತಿನ ಎಲ್ಲಾ ಭಾಷೆಗಳಲ್ಲಿ ಶೋಷಿತರ ಕೈಗೆ ಓದಲು ಸಿಗುವುದರಿಂದ ಅವರಿಗೆ ಆತ್ಮಸ್ಥೈರ್ಯವನ್ನು ಹೆಚ್ಚಿಸುವ ಊರುಗೋಲಾಗಬಹುದು.
-ಅನುಪಮಾ ಪ್ರಸಾದ್, ಕಥೆಗಾರ್ತಿ, ಕಾಸರಗೂಡು
Reviews
There are no reviews yet.