ಒಂದು ದೃಷ್ಟಿಯಲ್ಲಿ ‘ಬಲಿ’ ನಾಟಕವನ್ನು ನಾನು ೧೯೫೬ರಲ್ಲಿ ಕರ್ನಾಟಕ ಕಾಲೇಜಿನಲ್ಲಿ ‘ಯಶೋಧರ ಚರಿತ’ ಓದಿದ ಗಳಿಗೆಯಿಂದಲೇ ಬರೆಯಲಾರಂಭಿಸಿದೆ. ಅದು ‘ಹಿಟ್ಟಿನ ಹುಂಜ’ ಎಂಬ ಹೆಸರಿನಲ್ಲಿ ಪ್ರಕಟ ಕೂಡ ಆಯಿತು. ನಂತರ ಇದನ್ನು ಮತ್ತೆ ಹೊಸದಾಗಿ ಬರೆದು ಸತ್ಯದೇವ ದುಬೇ ಸೂಚಿಸಿದಂತೆ ‘ಬಲಿ’ ಎಂಬ ಹೊಸ ಹೆಸರಿಟ್ಟೆ.
ನಾಟಕದ ವಿಷಯ ಹಿಂಸೆ. ಭಾರತೀಯ ವೈಚಾರಿಕ ಪರಂಪರೆಯಲ್ಲಿ ಹಿಂಸೆಯನ್ನು ಕುರಿತು ಆಳವಾದ ವಿಚಾರ ಮಂಥನ ನಡೆದಿದೆ. ಉಳಿದ ಹಲವಾರು ವಾಗ್ವಾದಗಳಂತೆ ಇದು ಕೇವಲ ಬರಡು ಚರ್ಚೆಯಾಗಿಯೇ ಉಳಿಯದೆ ಜೀವನದ ಬಗ್ಗೆ ನಮಗಿದ್ದ ಮೂಲ ನಂಬಿಕೆಗಳನ್ನೇ ಪರೀಕ್ಷಿಸುವ ಆಂದೋಳನವಾಗಿದೆ.
ಗಿರೀಶ ಕಾರ್ನಾಡ
Reviews
There are no reviews yet.