“ಕಾರ್ನಾಡರ ನಾಟಕಗಳನ್ನು ಓದಿದವರ ಸಂಖ್ಯೆ ಹೆಚ್ಚಿಲ್ಲ. ನೋಡಿದವರ ಸಂಖ್ಯೆ ಮತ್ತೂ ಕಡಿಮೆ. ಆದರೆ ಅವರ ಪ್ರಜ್ಞೆ, ವಿಚಾರಧಾರೆ, ನಿಲುವು ಏನೆಂಬುದು ಇಡೀ ನಾಡಿಗೆ, ದೇಶಕ್ಕೇ ಗೊತ್ತಿದ್ದಂತಿತ್ತು. ಎಂದೂ ಸಭೆಗಳಲ್ಲಿ ಭಾಗವಹಿಸದ, ಸಾಹಿತ್ಯ ಸಮ್ಮೇಳನಗಳಲ್ಲಿ ಕಾಣಿಸಿಕೊಳ್ಳದ, ಹರಟೆಗಳಲ್ಲಿ ಸಮಯ ಕಳೆಯದ, ಹೇಳಿಕೆಗಳಲ್ಲಿ ಕಳೆದುಹೋಗದ ಕಾರ್ನಾಡರನ್ನು ಪ್ರೀತಿಸುವ, ಓದುವ, ಮೆಚ್ಚುವ ದೊಡ್ಡ ಬಳಗವೇ ಇದೆ.
ಅವರ ಒಂದು ಮಾತು ನನ್ನನ್ನು ಮತ್ತೆ ಮತ್ತೆ ಕಾಡುತ್ತದೆ:
ಸೈನಿಕನಂತೆ ವರ್ತಿಸುವುದರಿಂದ ನಾಗರಿಕನಿಗೆ ಸಿಗುವ ಅತಿದೊಡ್ಡ ಮಾನಸಿಕ ತೃಪ್ತಿಯೆಂದರೆ ಅವನು ಎಲ್ಲ ಸಾಮಾಜಿಕ, ನೈತಿಕ ಜವಾಬುದಾರಿಗಳಿಂದ ಪಾರಾಗುತ್ತಾನೆ. ಮನುಷ್ಯತ್ವದ ಅತ್ಯಂತ ಮಹತ್ವದ ಕುರುಹು ಎಂದರೆ ಆಯ್ಕೆ ಮಾಡುವ ಸ್ವಾತಂತ್ರ್ಯ. ನನ್ನ ನೈತಿಕ ಮೌಲ್ಯಗಳನ್ನು ನಾನು ನನ್ನ ಅಂತರಂಗದಿಂದ ಸೃಷ್ಟಿಸಬೇಕು.
ಕಾರ್ನಾಡರು ಅವರ ನೈತಿಕ, ಸಾಮಾಜಿಕ ಮತ್ತು ವೈಚಾರಿಕ ಮೌಲ್ಯಗಳನ್ನು ಅಂತರಂಗದಿಂದಲೇ ಸೃಷ್ಟಿಸಿಕೊಂಡ ಮಾನವೀಯ ಪ್ರತಿಭೆ.”
“ಬಹುರೂಪಿ ಗಿರೀಶ ಕಾರ್ನಾಡ” ಪುಸ್ತಕದಲ್ಲಿ ಅನೇಕ ಜನ ಗಿರೀಶ ಕಾರ್ನಾಡರ ಒಡನಾಡಿಗಳು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.
Reviews
There are no reviews yet.