ಮಹಾಭಾರತದ ಶಾಂತನು ಗಂಗಾ (ಮೂಲ ಮಹಾಭಾರತದಲ್ಲಿ ಶಾಂತನು ಎಂದೇ ಉಪಯೋಗಿಸಲಾಗುತ್ತಿದೆ.) ಮುಂತಾದ ಸಮಕಾಲೀನ ಐ. ಟಿ. ಯುವ ಜೋಡಿಯ ವರೆಗೆ ಇತಿಹಾಸದ ವಿಭಿನ್ನ ಸಂಧಿಗಳ ಜೋಡಿ ಪಾತ್ರಗಳ ದಾಂಪತ್ಯ ಸಂಬಂಧೀ ವಿಚಾರಗಳು ಈ ನಾಟಕದ ವಸ್ತು . ವೇದ, ಪುರಾಣಕಾಲೀನ ಸ್ತ್ರೀಯರು, ಚರಿತ್ರೆ ಮತ್ತು ಆಧುನಿಕ ಸ್ತ್ರೀಯರಿಗಿಂತಲೂ ಹೆಚ್ಚು ಸ್ವಂತಿಕೆ, ಕಸುವು ಉಳ್ಳವರಾಗಿದ್ದರೆಂಬುದು ಕುತೂಹಲ ಮೂಡಿಸುತ್ತದೆ. ಚರಿತ್ರೆಯ ಕಾಲಿದಾಸನ ಶಕುಂತಲೆಗಿಂತ ಮಹಾಭಾರತದ ಶಕುಂತಲೆ ಹೆಚ್ಚು ಘನತೆ, ಸ್ವಾಭಿಮಾನಿಯಾಗಿದ್ದಳು ಎನ್ನುವುದು ಇದಕ್ಕೊಂದು ಉದಾಹರಣೆ. ಪ್ರಾಯಃ ಸಮಕಾಲೀನ ಹಾಗೂ ಮುಂದಿನ ದಿನಗಳಲ್ಲಿ ಸ್ತ್ರೀ ಪ್ರಾಧಾನ್ಯತೆ ಬಗ್ಗೆ ಹೆಚ್ಚು ಆರೋಗ್ಯಕರ ಅರಿವು ಬೆಳೆಯುವ ಸಾಧ್ಯತೆ ಇದೆ. ಅಂತೆಯೇ, ವೈಯಕ್ತಿಕತೆ, ಕುಟುಂಬ, ಸಮಾಜ ಇವೆಲ್ಲದರಲ್ಲಿ ದಾಂಪತ್ಯದ ಸ್ನೇಹಮಯ ಕೊಡುಕೊಳ್ಳುವಿಕೆ ಒಂದು ಆರೋಗ್ಯಕರ ಕೇಂದ್ರವಾಗುತ್ತದೆ ಎನ್ನುವುದು ಮುಖ್ಯವಾಗುತ್ತದೆ.
ಈ ನಾಟಕದಲ್ಲಿ ಏಳು ಪ್ರಸಂಗಗಳಿದ್ದು ಅವೆಲ್ಲದರಲ್ಲೂ ಈ ದಾಂಪತ್ಯ ಸಂಬಂಧ ಮೂಲ ಸ್ರೋತವಾಗಿ ಹರಿಯುತ್ತದೆ.
-100%
Ebook
ಅಗಸ್ತ್ಯನಿಂದ ಐ.ಟಿ.ವರೆಗೆ
Author: Arya
Original price was: $0.72.$0.00Current price is: $0.00.
ಅಗಸ್ತ್ಯನಿಂದ ಐ.ಟಿ.ವರೆಗೆ :
(ದ್ವಿಪಾತ್ರ ನಾಟಕ ಪ್ರಸಂಗಗಳು)
ಬಹುಕಲಾವಿದರ ತಂಡಗಳ ಪ್ರದರ್ಶನದಿಂದ ಏಕವ್ಯಕ್ತಿ ಪ್ರದರ್ಶನದ ಹಂತಕ್ಕೆ ಬಂದು ನಿಂತಿರುವ ಇಂದಿನ ದಿನಗಳಲ್ಲಿ ಆರ್ಯರ ದ್ವಿಪಾತ್ರ ನಾಟಕಗಳು ಹೊಸತನ್ನೇ ನೀಡಿ ಮತ್ತು ಸಾಧ್ಯತೆಯನ್ನು ಸಾಬೀತುಪಡಿಸಿವೆ. ಇದರಲ್ಲಿನ ಏಳು ನಾಟಕಗಳು ವಸ್ತುವಿನ ಆಯ್ಕೆಯಲ್ಲಿ ವೈವಿಧ್ಯತೆ ಆಯಾ ಕಾಲಘಟ್ಟದ ವಸ್ತುವಿಗೆ ತಕ್ಕಂತೆ ಭಾಷೆಯ ಬಳಕೆ ಮತ್ತು ಸರಳ ಸಂಭಾಷಣೆ ಎನಿಸಿದರೂ ಅವುಗಳ ಒಳ ಅರ್ಥ ಪ್ರೇಕ್ಷಕನ ಮೆದುಳು ಹಾಗೂ ಮನಸ್ಸನ್ನು ಮತ್ತು ಹೃದಯವನ್ನು ಯಶಸ್ವಿಯಾಗಿ ತಲುಪುತ್ತವೆ. ಈಗಾಗಲೇ ಈ ನಾಟಕಗಳು ಆಕಾಶವಾಣಿಯಲ್ಲಿ ಪ್ರಸಾರಗೊಂಡು ಪುರಸ್ಕಾರಕ್ಕೂ ಪಾತ್ರವಾಗಿವೆ.
About this Ebook
Information
Additional information
Category | |
---|---|
Author | |
Publisher | |
Language | Kannada |
Book Format | Ebook |
Year Published | 2010 |
Reviews
Only logged in customers who have purchased this product may leave a review.
Reviews
There are no reviews yet.