ಆಗೊಮ್ಮೆ ಈಗೊಮ್ಮೆ
(ಗದ್ಯ ಲೇಖನಗಳ ಸಂಗ್ರಹ)
ಇದೊಂದು ಭಾಷಣಗಳು, ಲೇಖನಗಳು ಮತ್ತು ವ್ಯಕ್ತಿ ಚಿತ್ರಗಳ ಸಂಕಲನ. ಇದರಲ್ಲಿ ಗಿರೀಶ ಕಾರ್ನಾಡ ಅವರು ಕಳೆದ ಐದು ದಶಕಗಳಲ್ಲಿ ಬೇರೆ ಬೇರೆ ವೇದಿಕೆಗಳಲ್ಲಿ ಮಾಡಿದ 11 ಭಾಷಣಗಳು, ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾದ ಲೇಖನಗಳು ಮತ್ತು 6 ವ್ಯಕ್ತಿಚಿತ್ರಗಳು ಸೇರಿವೆ. ಕಳೆದ ಐದು ದಶಕಗಳಲ್ಲಿ ಬಿಡಿ ಬಿಡಿಯಾಗಿ ಬರೆದ ಲೇಖನಗಳು, ಮಾಡಿದ ಭಾಷಣಗಳನ್ನೆಲ್ಲ ಒಂದು ಕಡೆಗೆ ಸೇರಿಸಿದೆ. ಕೆಲವು ಇಂಗ್ಲಿಷ್ ಭಾಷಣಗಳನ್ನೂ ಕನ್ನಡಕ್ಕೆ ಭಾಷಾಂತರಿಸಿ ಎಲ್ಲ ಗದ್ಯ ಬರವಣಿಗೆಯನ್ನು ಒಂದು ಪುಸ್ತಕದಲ್ಲಿ ಹೊರತರುತ್ತಿರುವದು.