Ebook

ವೆನಿಸ್ಸಿನ ವ್ಯಾಪಾರ ಮತ್ತು ಕ್ರಮ ವಿಕ್ರಮ

Author: Akshara K V

80.00

ವೆನಿಸ್ಸಿನ ವ್ಯಾಪಾರ ಮತ್ತು ಕ್ರಮ ವಿಕ್ರಮ :
ವೆನಿಸ್ಸಿನ ವ್ಯಾಪಾರ –

ನಾಟಕದಲ್ಲಿ ಮೂರು ಪ್ರೇಮ ಪ್ರಸಂಗಗಳಿವೆ. ಪೋರ್ಷಿಯಾ–ಬೆಸಾನಿಯೋ, ನೆರಿಸಾ– ಗ್ರೇಷಿಯಾನೋ ಮತ್ತು ಜೆಸಿಕಾ–ಲೋರೆನ್ ಜೋ . ಮೊದಲಿನೆರಡು ಶೋಧಿಸಿ, ಶುದ್ಧ ಮಾಡಿದ ಫಿಲ್ಟರ್ ನೀರಿನ ಹಾಗೆ. ಜೆಸಿಕಾ–ಲೋರೆನ್ ಜೋ ಪ್ರೇಮಪ್ರಸಂಗ ಮನಸ್ಸು ಪುಲಕಗೊಳಿಸುವ ತಂಗಾಳಿಯ ಹಾಗೆ. ಈ ಮೂರು ಜೊತೆ ಆಡುವ ಮಾತಿನ ಶೈಲಿಯಲ್ಲಿ ಕೂಡ ಈ ಭಿನ್ನ ರೀತಿಯ ಅನುಭವವಾಗುತ್ತದೆ. ಅಚ್ಚುಕಟ್ಟು, ನಾಜೂಕು, ಸದಾ ಸಮತೂಕ ಕಾಯ್ದುಕೊಳ್ಳುವ ರೀತಿನೀತಿಗಳು. ಲೋರೆನ್ ಜೋ –ಜೆಸಿಕಾ ಮಧ್ಯೆ ಅಂಕುರಿಸುವ ಪ್ರೀತಿಯ ರೀತಿಯೇ ಮನಸ್ಸನ್ನು ಕುಣಿಸುವಂಥದು. ಯೆಹೂದಿ ಶೈಲಾಕನ ಮಗಳು ಜೆಸಿಕಾ, ಕ್ರಿಶ್ಚಿಯನ್ ಯುವ ಲೋರೆನ್ ಜೋ ಇವರ ಆಕರ್ಷಣೆ ಗಂಡು–ಹೆಣ್ಣುಗಳ ಮಧ್ಯದ ಪ್ರಕೃತಿ ಧರ್ಮದ ಆಕರ್ಷಣೆ. ಐದನೆ ಅಂಕದ ಮೊದಲ ದೃಶ್ಯದ ಮಾತುಗಳು ಹೂವಿನ ದಳಗಳು ಅರಳಿದ ಹಾಗೆ ಅರಳುತ್ತವೆ. ‘ಸುಮಕೆ ಸೌರಭ ಬಂದ ಗಳಿಗೆ’ ಕೂಡ ಇದೆ ಇರಬೇಕು.

ಕ್ರಮ ವಿಕ್ರಮ –

ಶೇಕ್ ಸ್ಪಿಯರ್ ಈ ನಾಟಕ ರಚನೆಯ ಸುಮಾರಿಗೆ ಸ್ವತಃ ಅತ್ಯಂತ ಗೊಂದಲದ ಮನಸ್ಥಿತಿಯಲ್ಲಿದ್ದಿರಬಹುದೆ ಎಂಬ ವಿಚಾರ. ಅವನ ವ್ಯಕ್ತಿತ್ವದಲ್ಲಿ, ಸುತ್ತಲ ಜಗತ್ತನ್ನು ಗ್ರಹಿಸುವ ರೀತಿಯಲ್ಲಿ, ಮನುಷ್ಯ ಸಂಬಂಧಗಳ ಸೂಕ್ಷ್ಮಗಳ ವಿಶ್ಲೇಷಣೆಯಲ್ಲಿ ಹಾಗೂ ಮನುಷ್ಯ–ಪ್ರಕೃತಿ, ನಶ್ವರ–ಶಾಶ್ವತ ಇವುಗಳ ಕುರಿತಾದ ಚಿಂತನೆಗಳಲ್ಲಿ ಬಹು ಕ್ರಾಂತಿಕಾರಿ ಬದಲಾವಣೆಗಳಾಗುತ್ತಿದ್ದವು ಎಂಬುದರಲ್ಲಿ ಅನುಮಾನವೇ ಇಲ್ಲ. ಶೇಕ್ ಸ್ಪಿಯರ್ ನ ಇಡೀ ಬದುಕು ಒಂದು ಬಗೆಯ ವಿಕಾಸದ ಪ್ರಕ್ರಿಯೆಯಲ್ಲಿಯೇ ತೊಡಗಿದ್ದಿತು ಎಂದು ಹೇಳಬೇಕು. ಶೇಕ್ ಸ್ಪಿಯರ್ ನಿಗೆ ಕಾಡಿದ್ದಿರಬಹುದಾದ ಗುಂಗಿನ ಪ್ರಧಾನ ಅಂಶವೆಂದರೆ ಮನುಷ್ಯನ ಆತ್ಮವಂಚನೆ, ಢೋಂಗಿತನ ಹಾಗೂ ಢಾಂಬಿಕತೆಗಳು. ಆತ್ಮವಂಚನೆ, ಢಾಂಬಿಕತೆಗಳು ಪ್ರದರ್ಶನಗೊಳ್ಳುವುದು ಮನುಷ್ಯನ ಪವಿತ್ರ–ಅಪವಿತ್ರ, ಉತ್ತಮ–ನೀಚ, ಹೆಣ್ಣು–ಗಂಡು ಇವುಗಳ ಕಲ್ಪನೆ ಹಾಗೂ ಅರ್ಥ ವಿವರಣೆಯಲ್ಲಿ; ….

Additional information

Category

Author

Publisher

Language

Kannada

Book Format

Ebook

Year Published

2007

Reviews

There are no reviews yet.

Only logged in customers who have purchased this product may leave a review.