ಅಸ್ತಮಾನದ ಕವಿತೆಗಳು
ಕುಶಾಲಿಗೆ
ಚಿತ್ರ ಬಿಡಿಸುವೆ
ಸುಡುವ ಕಾಯಕ
ವರವಲ್ಲಭ
ಹುಡುಗಿ ಹೇಳಿದ ಕಥೆ
ದೂತೆಯೊಡನೆ ಮಾತು
ದೂತೇ
ಕಣ್ಣ ತಪ್ಪಲಲಿ ನಡೆದ
ಶಿವತಪಸ್ಸು
ಗಾಳಿಯೊಸಗೆಗೆ ಅದುರಿ
ರೆಪ್ಪೆಯೊಡೆದಾಗ
ಭಸ್ಮಭೂಷಿತ – ನವಿಲು ಗರಿ ಧೃತ
ಕೈಯಲ್ಲಿ ಘಮಘಮದ
ಪಾರಿಜಾತ!
ಕೃಷ್ಣನೋ ಈಶ್ವರನೋ
ಕೇಳು ಹೋಗೇ.
ಈಶ್ವರನೋ ಕೃಷ್ಣನೋ
ಕೇಳು ಹೋಗೇ ದೂತೆ
ಕೃಷ್ಣನಾದರೆ ಕೊಳಲ ಮರೆತನ್ಯಾಕೆ?
ಸುತ್ತ ಮುತ್ತುವ
ಮತ್ತು ಸುತ್ತುವ
ಒಯ್ಯಾರಿಯರ ಹೆರಳಿನಲಿ
ಮುಡಿಸಿ ತೆಗೆಯುವ ಆಟವಾಡುತ
ಇಲ್ಲಿ ಬಂದನ್ಯಾಕೆ?
ನನ್ನ ಬಿಸಿಬಿಸಿ ಮುನಿಸ
ತಿಳಿಸ ಹೋಗೇ
ಅಮ್ಮಾ ದೂತೆ
ಹೇಳವಗೆ ಹೋಗು
ಬರಲಿ ಈಶ್ವರನಾಗಿ
ಕೊಳಲ ನುಡಿದು
ಹಳಸು ಹೂವನು ಬಿಸುಟು
ಶಿವನಾಗಿ ಬರಲು
Reviews
There are no reviews yet.