ವಾದಿರಾಜರು (ಕ್ರಿ.ಶ. ೧೪೮೦ – ೧೬೦೦) ಕನ್ನಡ ಹರಿದಾಸ ಪಂಥದ ಪ್ರಮುಖರಲ್ಲೊಬ್ಬರು.ಇವರು ವ್ಯಾಸರಾಯರ ಪ್ರಮುಖ ಶಿಷ್ಯರಲ್ಲಿ ಸೋದೆಯ ಮಠಾಧಿಪತಿಗಳಾಗಿದ್ದ ವಾದಿರಾಜರೂ ಒಬ್ಬರು.ಕನ್ನಡ ಮತ್ತು ಸಂಸ್ಕೃತ ಭಾಷೆಗಳಲ್ಲಿ ಅಪಾರ ಪಾಂಡಿತ್ಯವನ್ನು ಪಡೆದಿದ್ದರು. ಆತನು ಕವಿತೆ ತರ್ಕಬದ್ಧವಾದುದು.ಇವರ ವಾಗ್ವೈಖರಿಯನ್ನು ಮೆಚ್ಚಿದ ವಿಜಯನಗರ ಸಾಮ್ರಾಜ್ಯದ ರಾಜ ಶ್ರೀಕೃಷ್ಣದೇವರಾಯನು ಇವರಿಗೆ ಪ್ರಸಂಗಾಭರಣ ತೀರ್ಥ ಎಂಬ ಬಿರುದನ್ನು ನೀಡಿ ಗೌರವಿಸಿದರು.ಶ್ರೀಹರಿ ಭಕ್ತಿಯನ್ನು ಕೀರ್ತನೆಗಳ ಮೂಲಕ ಜನ ಸಾಮಾನ್ಯರಿಗೆ ತಿಳಿಕನ್ನಡದಲ್ಲಿ ಸರಳವಾಗಿ ಅರ್ಥವಾಗುವಂತೆ ಮಾಡಿದರು.ಅಷ್ಟ ಮಠಗಳಲ್ಲಿ ಈಗ ನಡೆಯುವ ಪರ್ಯಾಯೋತ್ಸವ ಪದ್ಧತಿಯನ್ನು ಪ್ರಾರಂಭಿಸಿದರು.
Produced by K.S.Music
Reviews
There are no reviews yet.