Availability: In StockPrintbook

ಸ್ವಪ್ನ ಸಾರಸ್ವತ

Original price was: ₹400.00.Current price is: ₹360.00.

ಸ್ವಪ್ನ ಸಾರಸ್ವತ’ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಗೆದ್ದಿದೆ ಮತ್ತು ಇದನ್ನು ತಮಿಳು, ಕೊಂಕಣಿ, ಮಲಯಾಳಂ ಮತ್ತು ಇಂಗ್ಲಿಷ್ ಭಾಷೆಗಳಿಗೆ ಅನುವಾದಿಸಲಾಗಿದೆ.

ಗೋಪಾಲಕೃಷ್ಣ ಪೈ ಅವರು ಬರೆದ ಕನ್ನಡದ ಮೇರು ಕಾದಂಬರಿ ‘ಸ್ವಪ್ನ ಸಾರಸ್ವತ’, ಭಾರತದ ಪಶ್ಚಿಮ ಕರಾವಳಿಯಲ್ಲಿ ವಾಸಿಸುತ್ತಿದ್ದ ಗೋವಾದಿಂದ ಮಂಗಳೂರಿನ ದಕ್ಷಿಣಕ್ಕೆ ಪಸರಿಸಿದ್ದ ಸಾರಸ್ವತರು ಎಂಬ ಸಮುದಾಯದ ವಲಸೆಯ ಕಥೆಯಾಗಿದೆ. ಸುಮಾರು 500 ವರ್ಷಗಳ ಹಿಂದೆ ಪೋರ್ಚುಗೀಸರು ಈ ಪ್ರದೇಶವನ್ನು ಪ್ರವೇಶಿಸಿದಾಗ ರಾಷ್ಟ್ರವು ಕಂಡ ವಸಾಹತುಶಾಹಿ ಪ್ರಾಬಲ್ಯವನ್ನು ಈ ಕಾದಂಬರಿ ಚಿತ್ರಿಸುತ್ತದೆ. ಈ ಕಾದಂಬರಿಯು ಬಲವಾಗಿ ಬೇರೂರಿದ್ದ ಈ ಸಮುದಾಯದ ಸ್ಥಳಾಂತರದ ಕಣ್ಣಿಗೆ ಕಟ್ಟಿದಂತಿರುವ ಪ್ರಸ್ತುತಿಯಾಗಿದ್ದು, ಇದು ಭೂಮಿಯ ಹೊಸ ಭಾಗದಲ್ಲಿ ಪುನರುತ್ಥಾನವನ್ನು ಕಂಡವರ ಕಥೆ-ವ್ಯಥೆ. ಸಮುದಾಯದ ಪ್ರಚಲಿತ ಕುಟುಂಬಗಳಲ್ಲಿ ಕ್ರಮೇಣ ಬದಲಾವಣೆಗಳನ್ನು ಹುಡುಕಲು ಇದು ಪ್ರಯತ್ನಿಸುತ್ತ, ಹಿಂದಿನ ಯುಗಗಳ ಜಂಟಿ ಕುಟುಂಬ ವ್ಯವಸ್ಥೆಯಿಂದ ಏಕೀಕೃತ ಕುಟುಂಬಗಳಿಗೆ ಸ್ಥಳಾಂತರಗೊಂಡ ಬಗೆಯನ್ನು ಹೇಳುತ್ತದೆ. ಅಂತಹ ಬದಲಾವಣೆಯ ಹಿನ್ನೆಲೆಯಲ್ಲಿ ವ್ಯಕ್ತಿಗಳ ನೈತಿಕ ಕ್ಷೀಣತೆಗೆ ಕಾರಣವಾಗುವ ಅಂಶಗಳನ್ನು ಇದು ನಿರೂಪಿಸುತ್ತದೆ.

‘ಸ್ವಪ್ನ ಸಾರಸ್ವತ’ ಕ್ರಿ.ಶ.1510 ರಿಂದ ಸುಮಾರು 1760 ರವರೆಗಿನ ಇನ್ನೂರೈವತ್ತು ವರ್ಷಗಳ ಅವಧಿಯಲ್ಲಿ ಹರಡಿರುವ ಏಳು ತಲೆಮಾರು ಸಮುದಾಯ ಸದಸ್ಯರ ಕಥೆಯಾಗಿದ್ದು ವಲಸೆ ಹೋದ ಒಂದು ಜನಾಂಗದ, ಕಾಲ್ಪನಿಕ ವಿಸ್ತಾರದಲ್ಲಿಯ ನೈಜ ಚಿತ್ರಣ. ಹಿಂದೂಗಳು, ಮುಸ್ಲಿಮರು, ಕ್ರಿಶ್ಚಿಯನ್ನರು, ಸೇನೆಗಳು, ಮುಖ್ಯಸ್ಥರು, ವ್ಯಾಪಾರಿಗಳು, ರೈತರು, ಪುರೋಹಿತರು, ಜಾದೂಗಾರರನ್ನು ಒಳಗೊಂಡ ನೂರೈವತ್ತಕ್ಕೂ ಹೆಚ್ಚು ಪಾತ್ರಗಳನ್ನು ಹೊಂದಿರುವ ಭೂದೃಶ್ಯ ವೈಭವ. ಇಲ್ಲಿ ಇತಿಹಾಸ ನಿರ್ಮಿಸಿದ ಜಾನಪದ ಕಥೆಗಳು, ದಂತಕಥೆಗಳು ಮತ್ತು ಪುರಾಣದ ದೃಷ್ಟಾಂತಗಳು ಹಾಸುಹೋಕ್ಕಾಗಿವೆ.

Swapna Sarswata is novel written by Gopalakrishna Pai. It’s the fist novel from the author Gopalakrishna Pai and it is collection of many short stories.

Plot:
The novel narrates the Gowda Saraswat community’s diaspora along the west coast of India between the early 16th Century and late 18th Century. The author put in years of research, delving into written histories and oral narrations, covering a huge time span and the social dynamics within the community in the perspective of historical events. “Swapna Saraswata” is the story of the fall of Gowda Saraswat Brahmin community who lived in Goa four hundred years ago. It is a tragic story of the Gowda Saraswat Brahmin community leaving their land in Goa and migrating to an unknown land due to the oppression of the Portuguese. The arrival of the Portuguese to India, the conquest of Goa by the colonists and the conversion of temples, the destruction of temples, etc., have profoundly affected the beliefs and emotions of the local Gowda Saraswat Brahmin families. In such a situation, Vittu Pai, the grandson of Narasappayya, a resident of the Verane village in Goa, vacates the village with 5-6 families in the night in order to preserve culture, faith, religion, and life. They were emotionally attached to that land and culture and it was painful for them to vacate the village. To escape from the hands of Portuguese many families travelled till Kochi, and few families settling in the places of Coastal Karnataka. Likewise, the family of Vittu Pai settles in the southern village called Bellambeedu in Kumbale. They start their new business there and settled. The novel is meant to convey a kind of message to anyone facing a storm of change by quoting the example of the life of the Gowda Saraswat Brahmin community who have seen many difficulties of survival in history. Author mentioned that he has worked for nearly 20 years and sourced 4,000 books, manuscripts and documents for this work. He has traveled from Goa to Kochi to meet people and studied their lifestyle. He has worked for nearly five years on the draft and revised it six times.

This book won prestigious Karnataka Sahitya Academy Award in the year 2009 and the H. Shantaram Literary Award. This book won 2011’s Kendra Sahitya Akademi Award for the author under the category Kannada. The book has been translated into English, Marathi, Malayalam, Hindi, Bengali and Tamil.

Additional information

Author

Publisher

Book Format

Printbook

Language

Kannada

Category

Reviews

There are no reviews yet.

Only logged in customers who have purchased this product may leave a review.