Availability: In StockPrintbook

ಶೋಕಚಕ್ರ

Author: Shriranga

Original price was: ₹60.00.Current price is: ₹54.00.

ಶೋಕಚಕ್ರ

ಮಹಾತ್ಮಾ ಗಾಂಧಿಯವರ ಚಳವಳಕ್ಕೆ ಪ್ರಾರಂಭವಾದದ್ದು ೧೯೨೦ರಲ್ಲಿ . ೧೯೨೪ರಲ್ಲಿ ೨೦ ನಿಮಿಷಗಳ ವರೆಗೆ ಅವರ ಸಂದರ್ಶವನ್ನು ಪಡೆದಿದ್ದೆ. ರಾಜಕೀಯಕ್ಕಿಂತ ಸಾಮಾಜಿಕ, ಅದಕ್ಕಿಂತ , ಅಂತರಂಗಿಕ  ಸುಧಾರಣೆ ಅಗತ್ಯ ಎಂಬುದನ್ನು ಆಗ ನಾನು ಕಲಿತುಕೊಂಡ ಪಾಠ.
ಸ್ವಾತಂತ್ರ್ಯ ಪ್ರಾಪ್ತಿಯ ತರುವಾಯ ನಾನು ಬಹಳ ಆಶೆಯಿಂದ ಪರಿಸ್ಥಿತಿಯನ್ನು ನೋಡುತ್ತಲಿದ್ದೆ. ಯಾವುದೊ ಒಂದು ಕಾರಣಕ್ಕೆ ರಾಜಕೀಯ ಸ್ವಾತಂತ್ರ್ಯದ ಅವಸರವಿದ್ದು ಮಹಾತ್ಮಾಜಿಯವರು ಅದಕ್ಕೆ ಪ್ರಾಶಸ್ತ್ಯವನ್ನು ಕೊಟ್ಟಿದ್ದರು. ಈಗ ಆ ಜಂಜಾಟ ಮುಗಿಯುತ್ತಲ್ಲ? ಸಾವಿರಾರು ವರ್ಷಗಳಿಗೊಮ್ಮೆ ಅವತರಿಸುವ ಭಗವಂತನ ಅಂಶದಂತಿದ್ದ ಮಹಾತ್ಮಾಜಿಯವರಿಂದ ನಿಜವಾದ- ಅಂತರಂಗಿಕ-ಸುಧಾರಣೆ ಜನತೆಯಲ್ಲಿ ಮೂಡುವುದಲ್ಲ? ಹೀಗೆ ಉತ್ಸಾಹಗೊಳ್ಳುತ್ತಿರುವಾಗ ಜನವರಿ ೩೦, ೧೯೮೯ರ ದುರ್ಘಟನೆ ನಡೆದುಹೋಯಿತು. “ಜಗತ್ತಿನ ದೀಪ ನಂದಿತು.”
ಈ ಸಂದರ್ಭದ ಹಿನ್ನಲೆಯಲ್ಲಿ ದೇಶದ ಚುನಾವಣಾ, ಸ್ಥಾನಿಕ ಮುಂದಾಳುಗಳ ಸಾಂಸ್ಕೃತಿಕ ಮಟ್ಟ ಇದನ್ನೆಲ್ಲ ನೋಡಿ ಮೂಡಿದ ಭಾವನೆಗಳೇ ಈ ‘ಶೋಕಚಕ್ರ ‘ ನಾಟಕದಲ್ಲಿ ಮೂಡಿದೆ. ಇಲ್ಲಿಯ ಆಯಾ ಪಾತ್ರಗಳೇ ಪರಿಸ್ಥಿತಿಯನ್ನು ಚನ್ನಾಗಿ ಚಿತ್ರಿಸುವುವು.

Additional information

Category

Author

Publisher

Language

Kannada

Book Format

Printbook

Reviews

There are no reviews yet.

Only logged in customers who have purchased this product may leave a review.