ಇದೊಂದು ಅಪರೂಪದ ಶಂಕರ ಪ್ರವೇಶಿಕೆ. ಶಂಕರಾಚಾರ್ಯರನ್ನು ಅವರ ತತ್ತ್ವ-ಸಿದ್ಧಾಂತಗಳ ಸೀಮಿತ ಆವರಣದಿಂದ ಮೇಲೆತ್ತಿ ಸಮಕಾಲೀನ ಕಾಳಜಿಗಳ ಜತೆಗಿನ ಸಂವಾದದಲ್ಲಿ ಪರಿಚಯಿಸಲು ಹೊರಟಿರುವ ಮಹಾತ್ವಾಕಾಂಕ್ಷೆ ಈ ಕೃತಿಯ ಹಿನ್ನೆಲೆಯಲ್ಲಿದೆ. ದಾರ್ಶನಿಕ ಚಿಂತನೆಗಳ ನಿಜಮಾರ್ಗವನ್ನೇ ಅನುಸರಿಸುತ್ತ ಈ ಪುಸ್ತಕವು, ಶಂಕರರು ನಮಗೆ – ಅಂದರೆ ಸಾಮಾನ್ಯ ಓದುಗರಿಗೆ – ಇವತ್ತಿನ ಕಾಲದೇಶಗಳಲ್ಲಿ ಹೇಗೆ ಉಪಯುಕ್ತ ಎಂಬುದನ್ನು ಕಾಣಿಸುವ ಸಮಗ್ರದೃಷ್ಟಿಯ ಕಥನವೊಂದನ್ನು ಮಾಡುತ್ತದೆ. ಇದೊಂದು ಸಮರ್ಥ ಪ್ರವಾಸ ಕಥನ; ಶಂಕರಲೋಕದಲ್ಲಿ ವಿಹರಿಸುತ್ತ ಅದು ನಮ್ಮನ್ನು ಆ ದಾರ್ಶನಿಕತೆಯ ಆದಿಯಿಂದ ಮೊದಲುಗೊಂಡು ಅದ್ವೈತ ಸಿದ್ಧಾಂತದ ಪ್ರಧಾನ ಪರಿಕಲ್ಪನೆಗಳ ವಲಯಗಳಲ್ಲಿ ಓಡಾಡಿಸುತ್ತ ಶಂಕರರ ಸಾಮಾಜಿಕ ನಿಲುವುಗಳವರೆಗೂ ಕರೆದೊಯ್ಯುತ್ತದೆ. ‘ಭಾರವೆನ್ನಿಸುವ’ ಫಿಲಾಸಫಿ ಪುಸ್ತಕಗಳ ಸಿದ್ಧಮಾದರಿಯನ್ನು ಈ ಪುಸ್ತಕವು ತನ್ನ ಚತುರ ಗದ್ಯಶೈಲಿಯಿಂದ ಒಡೆಯುತ್ತದೆ; ಇದರೊಂದಿಗೆ ಕೂಡಿರುವ ಚಿತ್ರಗಳು ವಿಸ್ಮಯಗೊಳಿಸುತ್ತ ನಮ್ಮ ಓದಿನ ಅನುಭವಕ್ಕೆ ಆಕರ್ಷಕ ಆಯಾಮಗಳನ್ನು ಕೂಡಿಸುತ್ತವೆ. ಯಾವುದೇ ನಿರ್ದಿಷ್ಟ ನಿಲುವಿನ ದಾಕ್ಷಿಣ್ಯಕ್ಕೆ ಸಿಲುಕದೆ, ವಿಮರ್ಶಾತ್ಮಕವಾಗಿ ನೋಡುತ್ತ, ಸಾದ್ಯಂತ ನಮ್ಮ ಆಸಕ್ತಿಯನ್ನು ಕಾಯ್ದುಕೊಳ್ಳುವ ಈ ಬರಹವು ಸಾರ್ವಜನಿಕವಾಗಿ ಇವತ್ತು ನಾವು ದಾರ್ಶನಿಕ ಜಿಜ್ಞಾಸೆಗಳನ್ನು ಹೇಗೆ ನಡೆಸಬಹುದೆಂಬುದಕ್ಕೆ ಒಳ್ಳೆಯ ದೃಷ್ಟಾಂತ ಎಂಬಂತಿದೆ.ಈ ಕಥನವನ್ನು ಪ್ರವಾಸಸಾಹಿತ್ಯವೆಂದು ವರ್ಗೀಕರಿಸಿಕೊಂಡಿದ್ದಕ್ಕೆ ಇನ್ನೊಂದು ಪ್ರಮುಖ ಕಾರಣವೂ ಇದೆ. ಲಂಡನ್ನಿಗೆ ಪ್ರವಾಸ ಹೋದ ಬೆಕ್ಕು ರಾಣಿಯ ಮಂಚದ ಅಡಿಗಿರುವ ಇಲಿಯನ್ನು ಮಾತ್ರವೇ ಕಂಡುಬಂದ ಹಾಗೆ, ಬಹುತೇಕ ಪ್ರವಾಸಿಗರು ಯಾವ ಊರಿಗೆ ಹೋದರೂ ಕಾಣುವುದು ತಮ್ಮ ಮನಸ್ಸಿಗೆ ತಾಗುವ ಸಂಗತಿಗಳನ್ನು ಮಾತ್ರವೇ. ಅಷ್ಟೇ ಅಲ್ಲ, ಆ ಊರಲ್ಲಿ ಅಪರಿಚಿತವಾದದ್ದು ಕಂಡಾಗಲೂ ನಾವದನ್ನು ಅರ್ಥ ಮಾಡಿಕೊಳ್ಳುವುದು ನಮ್ಮೂರಿನ ಪರಿಚಿತ ನೆನಪುಗಳ ಮುಖಾಂತರವೇ.
Ebook
ಶಂಕರ ವಿಹಾರ
₹150.00
About this Ebook
Information
Additional information
Category | |
---|---|
Language | Kannada |
Book Format | Ebook |
Publisher |
Reviews
Only logged in customers who have purchased this product may leave a review.
Reviews
There are no reviews yet.