ಮಾನವ ಸಾಮರ್ಥ್ಯಗಳ ಸರ್ವ ತೋಮುಖ ಬೆಳವಣಿಗೆಯನ್ನು ಶಿಕ್ಷಣವೆನ್ನಬಹುದು ಗಾಂಧೀಜಿ ಬರೆದಿರುವಂತೆ ಶಿಕ್ಷಣವೆಂದರೆ ಮಗುವಿನ ಮನುಷ್ಯನ ದೇಹ ಮನಸ್ಸು ಆತ್ಮಗಳು ಉತ್ತಮ ಶಕ್ತಿ ಗಳನ್ನೆಲ್ಲ ಹೊರ ಗೆಳೆಯುವುದು. ಪ್ರಾಚೀನ ಗ್ರೀಕ್ ತ ತ್ತ್ವಜ್ಞಾನಿ ಅರಿಸ್ಟಾಟಲ್ ನುಡಿದಿರುವಂತೆ,”ಬಲಿಷ್ಠ ದೇಹದಲ್ಲಿ ಬಲಿಷ್ಠ ಮನಸ್ಸಿನ ಸೃಷ್ಟಿಯೇ ಶಿಕ್ಷಣ.
ಒಟ್ಟಿನಲ್ಲಿ ಮನೋವಿಜ್ಞಾನವನ್ನು ವರ್ತನಾತ್ಮಕ ಚಟುವಟಿಕೆಗಳ ಮತ್ತು ಅನುಭವಗಳ ವ್ಯವಸ್ಥಾತ್ಮಕ ಅಧ್ಯಯನವೆನ್ನಬಹುದು. ಆಲೋಚಿಸಿಸುವುದು, ತರ್ಕಿಸುವುದು, ಕಲ್ಪನೆ ,ಮಾಡಿಕೊಳ್ಳುವುದು, ಆನಂದಿಸುವುದು, ವಿಷಾದಿಸುವುದು, ಕೋಪಿಸಿಕೊಳ್ಳುವುದು, ಅಷ್ಟೇ ಏಕೆ, ನಡೆಯುವುದು, ಈಜುವುದು, ನರ್ತಿಸುವುದು ಇತ್ಯಾದಿ ನಾನಾ ಬಗೆಯ ಚಟುವಟಿಕೆಗಳ ವ್ಯಾಪ್ತಿಗೆ ಸೇರಿವೆ. ಪ್ರಜ್ಞಾಹೀನ ಸ್ಥಿತಿಯ, ಸುಪ್ತ ಮನಸ್ಸಿನ ಮತ್ತು ಜಾಗೃತ ಮನಸ್ಸಿನ ಚಟುವಟಿಕೆಗಳೆಲ್ಲವೂ ಮನೋ ವಿಜ್ಞಾನದ ಕಕ್ಷೆಯಲ್ಲಿ ಬರುತ್ತವೆ.
Reviews
There are no reviews yet.