ಈ ಪುಸ್ತಕಕ್ಕೆ ‘ಸಾಹಿತ್ಯ ಕಥನ‘ ಎಂಬ ಹೆಸರು ಕೊಟ್ಟಿರುವುದಕ್ಕೆ ಒಂದು ವಿಶೇಷ ಕಾರಣವೂ ಇದೆ. ಸಾಹಿತ್ಯಾನುಭವದಲ್ಲಿ ಹುಟ್ಟಿರುವ ಪರಿಕಲ್ಪನೆಗಳಿಗೆ ಉಳಿದ ಜ್ಞಾನಕ್ಷೇತ್ರಗಳಲ್ಲೂ ಅಪಾರ ದೀಪ್ತಿ ಸಾಮರ್ಥ್ಯ ಇದೆ ಎಂಬ ನಂಬಿಕೆ ಇದರ ಹಿಂದೆ ಕೆಲಸ ಮಾಡಿದೆ. ಹೀಗಾಗಿ, ಇಲ್ಲಿರುವ ಸಾಕಷ್ಟು ಲೇಖನಗಳು ‘ಶುದ್ಧ ಸಾಹಿತ್ಯ‘ದ ವಲಯದಾಚೆಗಿರುವ ವಸ್ತುಗಳನ್ನು ಕುರಿತವು. ಆದರೆ, ಆ ಅನುಭವಗಳನ್ನು ಅರ್ಥೈಸುವುದಕ್ಕೆ ನಾನು ಬಳಸಿರುವ ತಂತ್ರಗಳು ಶುದ್ಧಾಂಗವಾಗಿ ಸಾಹಿತ್ಯ ಮೀಮಾಂಸೆಯವು. ಸಮಸ್ತ ಜ್ಞಾನವೂ ಒಂದು ಬಗೆಯ ಕಥನವೇ ಎನ್ನುವುದು ನನ್ನ ಶ್ರದ್ಧೆಯ ಒಂದು ಮುಖವಾದರೆ, ಅದರ ಇನ್ನೊಂದು ಮುಖ ಎಲ್ಲ ಜ್ಞಾನಗಳನ್ನೂ ಸಾಹಿತ್ಯ ಮೀಮಾಂಸೆಯ ಪರಿಕರಗಳಿಂದ ಪ್ರವೇಶಿಸಲು ಸಾಧ್ಯ ಎಂಬ ನಿಲುವು.

ನಮ್ಮ ಸಂತೃಪ್ತ ಬೌದ್ಧಿಕ ಜಗತ್ತಿನಲ್ಲಿ ಆದಿಮ ಅವ್ಯವಸ್ಥೆ ಉಂಟಾಗುತ್ತದೆ ಎಂಬ ಭಯವೂ ಸಹಜವೇ. ಬೌದ್ಧಿಕ ಜಗತ್ತಿನಲ್ಲಿ ಆದಿಮ ಪ್ರಳಯವೇ ಅತ್ಯಂತ ಸೃಜನಶೀಲ ಸ್ಥಿತಿ. ಉಳಿದವೆಲ್ಲ ಮಂಕುಹಿಡಿಸುವ ರೂಢಿಗಳು, ಆದರೆ, ಬೌದ್ಧಿಕ ಪ್ರಳಯ ಹೊಸಬಗೆಯ ಸಂಯೋಜನೆಗಳಿಗೆ ದಾರಿ ಮಾಡಿಕೊಡುತ್ತದೆ. ನಾವು ನಮ್ಮ ಸಾಹಿತ್ಯದ ಎಂ. ಎ. ತರಗತಿಗಳಲ್ಲಿ, ಶುಷ್ಕ ಸೆಮಿನಾರುಗಳಲ್ಲಿ ಕಲಿಯುತ್ತಿರುವ, ಚರ್ಚಿಸುತ್ತಿರುವ ಸಿದ್ಧ ಹಾಗೂ ಜಡ ಆಕೃತಿಗಳಾಚೆಗೆ ಹೋಗಲು ಇದು ಸಹಾಯಕವಾಗುತ್ತದೆ.

Additional information

Author

Publisher

Book Format

Ebook

Language

Kannada

Category

Reviews

There are no reviews yet.

Only logged in customers who have purchased this product may leave a review.