ಮಾನವನಿಗೆ ಅತಿಶಯ ದುಃಖವಾಯಿತೆಂದರೆ, ಆತನ ಮಿದುಳು ಅದನ್ನು ಸಹಿಸುವ ಶಕ್ತಿಯನ್ನು ಕಳೆದುಕೊಳ್ಳುತ್ತದೆ. ಆತನು ದೀಙ್ಮೂಢನಾಗುತ್ತಾನೆ ಇಂತಹ ಮನುಷ್ಯನ ದುಃಖದ ಕಾರಣವನ್ನು ಫ್ಯಾಶ್ ಬ್ಯಾಕ್ ಪದ್ಧತಿಯಿಂದ ಹಿಂಜುತ್ತ, ಪೂರ್ಣ ಕಥೆಯ ಸುರುಳಿಯನ್ನು ಬಿಚ್ಚಿ ತೋರಿಸುತ್ತದೆ.
ಒಬ್ಬ ಪೋಲಿಸ್ ಅಧಿಕಾರಿಯ ಜೀವನದ ಸುತ್ತಲೂ ಹೆಣೆದಿದ್ದಾರೆ. ಪೋಲಿಸರು ಕೊಲೆ ಗಡುಕರನ್ನೂ ಡಕಾಯಿತರನ್ನೂ ಎದುರಿಸಿ ಅವರನ್ನು ಚಾಣಾಕ್ಷತನದಿಂದ ಸೆರೆ ಹಿಡಿದು, ತನಿಖೆ ಮಾಡುವಾಗ ಎದುರಿಸಬೇಕಾಗುವ ಮಾನಸಿಕ ದೈಹಿಕ ಶ್ರಮಗಳ ಪರಿಣಾಮವಾಗಿ, ಮಾನವತೆಯ ಕೆಲವು ಕಟ್ಟಳೆಗಳನ್ನು ಹಿಂದೊತ್ತಿ ಕಾರ್ಯ ಮಾಡಬೇಕಾಗುತ್ತದೆ. ಇಂತಹ ಅಪರಾಧಗಳ ಮಾನಸಿಕ ಪ್ರವೃತ್ತಿಯನ್ನು ಅಳೆಯಬೇಕಾದರೆ, ಅವರಂತೆಯೇ ಪಶು ಪ್ರವೃತ್ತಿಯಿಂದ ನಡೆದುಕೊಳ್ಳಬೇಕಾಗುತ್ತದೆ. ಆದುದರಿಂದ ಪೋಲಿಸರ ಈ ತರಹದ ಸೇವೆಯು ಅತ್ಯಂತ ದುಸ್ತರವಾದದ್ದು. ಪೋಲಿಸರು ತಮ್ಮ ಜೀವನವನ್ನು ಗಂಡಾಂತರದಲ್ಲಿ ಸಿಲುಕಿಸಿ ಹೋರಾಡಬೇಕಾಗುತ್ತದೆ. ಇಂತಹ ಅಪರಾಧಿಗಳ ಮಾನಸಿಕ ಚೌಕಟ್ಟನ್ನು ತಿಳಿದುಕೊಳ್ಳಲು ಅನೇಕ ಅನುಭವಗಳನ್ನು ಪಡೆಯಬೇಕಾಗುತ್ತದೆ.
Reviews
There are no reviews yet.