Ebook

ಒಂದು ತುತ್ತಿನ ಕತೆ

Original price was: $2.16.Current price is: $1.30.

ಕೃಷಿ ಪ್ರವಾಸ ಕಥನ ಮೂಲಕ ಅನ್ನದ ಅರಿವು ಬಿತ್ತುವ ವಿಶೇಷ ಪ್ರಯತ್ನವಿದು. ರಾಜ್ಯದ ಮೂಲೆ ಮೂಲೆಯ ಕೃಷಿ ನೆಲೆಯಿಂದ ಎತ್ತಿ ತಂದ ಜ್ಞಾನ ದಾಸೋಹ ಇಲ್ಲಿದೆ.

ಸುಕೋ ಬ್ಯಾಂಕ್ನ ಸುಕೃತ ಕೃಷಿ ಪ್ರಶಸ್ತಿ ಸಮಿತಿಯ ಸಂಚಾಲಕರಾದ ಕಳವೆ ರಾಜ್ಯದ ಕೃಷಿ ಪ್ರವಾಸ ನಡೆಸುತ್ತಿದ್ದಾರೆ. ಅನುಭವ, ಅಧ್ಯಯನ ನೋಟಗಳನ್ನು ದಾಖಲಿಸಿದ್ದಾರೆ. ರಾಜ್ಯದ ಕೃಷಿ ಜಗತ್ತನ್ನು ಕಳವೆ ಕಣ್ಣಿನ ಮೂಲಕ ನೋಡುವ ಅವಕಾಶ ದೊರೆಯುತ್ತಿದೆ. ಕೃಷಿ ಪ್ರವಾಸ ಕಥನ ಮೂಲಕ ಅನ್ನದ ಅರಿವು ಬಿತ್ತುವ ವಿಶೇಷ ಪ್ರಯತ್ನವಿದು. ರಾಜ್ಯದ ಮೂಲೆ ಮೂಲೆಯ ಕೃಷಿ ನೆಲೆಯಿಂದ ಎತ್ತಿ ತಂದ ಜ್ಞಾನ ದಾಸೋಹ ಇಲ್ಲಿದೆ.
ಸರಣಿ ಆತ್ಮಹತ್ಯೆ, ಬರ, ಅಕಾಲಿಕ ಮಳೆ ಪರಿಣಾಮದಿಂದಾಗಿ ಕೃಷಿ ಬದುಕು ಸಂಕಟದಲ್ಲಿದೆ, ಆದರೆ ಸೋಲಿನ ಕತೆ ಹೇಳುವುದಷ್ಟೇ ನಮ್ಮ ಕೆಲಸವಲ್ಲ. ಬದುಕಿನ ದಾರಿ ತೋರಿಸುವದೂ ಅಗತ್ಯವಿದೆ. ಮನೆಮಂದಿಯೆಲ್ಲ ಕುಳಿತು ದಿನವೂ ಒಂದೊಂದೇ ತುತ್ತಿನ ಕತೆ ಓದಿದರೆ ಅನ್ನದ ಅರಿವಾಗಬಹುದು. ಇಲ್ಲಿನ ಬರಹಗಳು ಗ್ರಾಮದ ಹೊಲದೆಡೆಯಿಂದ ಎತ್ತಿ ತಂದವು. ನಮ್ಮ ರೈತರನ್ನು ಮಾತಾಡಿಸಿ ಹೊರಟಾಗ ಅವರು ಒಂದಿಷ್ಟು ಬೀಜಗಳನ್ನು ನೀಡಿದ್ದಾರೆ. ಭೂಮಿಗೆ ಬಿತ್ತುವ ಬೀಜಗಳನ್ನು ಈಗ ಮಿದುಳಿನಲ್ಲಿ ಊರುವ ಕಾರ್ಯಕ್ಕೆ ಕೈಹಾಕಿದ್ದೇನೆ, ಇದಕ್ಕೆ ಕೃಷಿ ಆಸಕ್ತರೆಲ್ಲರ ಸಹಕಾರ ಬೇಕು. ‘ಒಂದು ತುತ್ತಿನ ಕತೆ’ ಕೃಷಿ ಜಾಗೃತಿ ಮೂಡಿಸುವ ಒಂದು ಪುಟ್ಟ ಪ್ರಯತ್ನವಾಗಿದೆ.

Additional information

Author

Publisher

Book Format

Ebook

Language

Kannada

Pages

176

Year Published

2017

Category

Reviews

There are no reviews yet.

Only logged in customers who have purchased this product may leave a review.