‘ನವಕರ್ನಾಟಕ ಕಿರಿಯರ ಕಥಾಮಾಲೆ‘ಯಲ್ಲಿ ಪ್ರಕಟವಾಗಿರುವ ನೀತಿ-ನಡತೆಯ ಕಥೆಗಳು. ವಿವಿಧ ಲೇಖಕರ ಆಯ್ದ ಉತ್ತಮ ಕಥೆಗಳ ಆಡಿಯೋ ಪುಸ್ತಕ. ಈ ಎಲ್ಲ ಕಥೆಗಳು ಸರಳ ಶೈಲಿಯಲ್ಲಿದ್ದು ಮಕ್ಕಳನ್ನು ಆಕರ್ಷಿಸುತ್ತವೆ, ಕುತೂಹಲ ಕೆರಳಿಸುತ್ತವೆ, ಮನರಂಜನೆ ನೀಡುತ್ತವೆ, ನಕ್ಕು ನಲಿಸುತ್ತವೆ. ಹಿರಿಯರಿಂದ ‘ನೀನು ಜಾಣ ಅಥವಾ ಜಾಣೆ’ ಎನ್ನಿಸಿಕೊಳ್ಳಲು ಮಕ್ಕಳು ಹಂಬಲಿಸುವುದು ಸಹಜವಾದುದು. ಸದಾ ಮಕ್ಕಳ ಮೇಲೆ ಸಿಡಿಮಿಡಿಗೊಳ್ಳುವ ತಂದೆ ತಾಯಿಯರು, ಮಕ್ಕಳು ನಿಜವಾದ ಜಾಣತನ ಪ್ರದರ್ಶಿಸಿದಾಗಲಾದರೂ, ತಮ್ಮ ಜಿಪುಣತನ ಬಿಟ್ಟು ಮಕ್ಕಳನ್ನು ಅವರ ಜಾಣತನದ ಬಗ್ಗೆ ತಾರೀಫು ಮಾಡಬೇಕೆಂಬ ಸಂದೇಶ ಸಹ ಈ ಕಥೆಗಳಲ್ಲಿದೆ.
ಪರಿಚಯ
1. ಪ್ರಾಣದ ಬೆಲೆ – ಪ. ರಾಮಕೃಷ್ಣ ಶಾಸ್ತ್ರಿ
2. ಆಟದ ಕೋವಿ – ಪಳಕಳ ಸೀತಾರಾಮ ಭಟ್ಟ
3. ಅತಿ ಆಸೆ ಗತಿಗೇಡು – ಪಳಕಳ ಸೀತಾರಾಮ ಭಟ್ಟ
4. ಸನ್ಯಾಸಿ ಮತ್ತು ದರೋಡೆಕೋರರು – ಪಳಕಳ ಸೀತಾರಾಮ ಭಟ್ಟ
5. ಪಾಠ ಕಲಿಸಿದ ನಾಟಕ ಪಳಕಳ – ಸೀತಾರಾಮ ಭಟ್ಟ
6. ಸದ್ದಿಲ್ಲದ ದೀಪಾವಳಿ – ಸಂಪಟೂರು ವಿಶ್ವನಾಥ್
7. ಚೆಲುಮೆ – ಸಂಪಟೂರು ವಿಶ್ವನಾಥ್
8. ಪರೋಪಕಾರ – ಸಂಪಟೂರು ವಿಶ್ವನಾಥ್
9. ಶಿಷ್ಯವೃತ್ತಿ – ಸಂಪಟೂರು ವಿಶ್ವನಾಥ್
10. ಸತ್ಯವೇ ನಿತ್ಯ – ದೊಡ್ಡಬಾಣಗೆರೆ ಪ್ರಕಾಶಮೂರ್ತಿ
11. ನಂಬಿಕೆಗೆ ದ್ರೋಹ ಬಗೆದ ರಾಜಕುಮಾರ – ದೊಡ್ಡಬಾಣಗೆರೆ ಪ್ರಕಾಶಮೂರ್ತಿ
12. ಯಾರು ಬಡವರು – ವಿ. ರಾಮಚಂದ್ರ ಶಾಸ್ತ್ರಿ
13. ಕಥೆಗಾರ ಲೋಕೇಶನ ಕಥೆ – ವಿ. ರಾಮಚಂದ್ರ ಶಾಸ್ತ್ರಿ
Reviews
There are no reviews yet.