ಮೃತ್ಯು
ಸಮಯದಲ್ಲಿ, ಮೊದಲು ಹಾಗೂ ನಂತರ…
ದಾದಾ ಭಗವಾನರ ನಿರೂಪಣೆ
ಯಾವುದೊಂದು ವಸ್ತು ಜನಿಸುವುದೋ
ಅದರ ಮೃತ್ಯು ಅವಶ್ಯವಾಗಿ ಬರುವುದು.
ಈ ಜನನ-ಮರಣವು ಆತ್ಮದಲ್ಲ,
ಆತ್ಮವು ಪರ್ಮನೆಂಟ್ ವಸ್ತುವಾಗಿದೆ.
ಈ ‘ಮೃತ್ಯು’ ಎನ್ನುವುದು ಮನುಷ್ಯನಿಗೆ ಎಷ್ಟೊಂದು ಭಯವನ್ನುಂಟು ಮಾಡಿಬಿಡುತ್ತದೆ. ಅದೆಷ್ಟೋ ರೀತಿಯಲ್ಲಿ ಆಘಾತವನ್ನುಂಟುಮಾಡುವುದಲ್ಲದೆ, ಸಂಪೂರ್ಣವಾಗಿ ದುಃಖದಲ್ಲಿ ಮುಳುಗಿಸಿಬಿಡುತ್ತದೆ. ಮೃತ್ಯು ಅಂದರೆ ಏನಿರಬಹುದು? ಮೃತ್ಯುವಿನ ಮೊದಲು ಹೇಗಿರಬಹುದು? ಮೃತ್ಯುವಿನ, ಆ ವೇಳೆಯು ಹೇಗಿರಬಹುದು? ಮೃತ್ಯುವಿನ ನಂತರ ಏನಿರಬಹುದು? ಹೀಗೆ ಮೃತ್ಯುವಿನ ಅನುಭವವನ್ನು ಹೇಳುವವರಾದರೂ ಯಾರು? ಯಾರು ಮೃತ್ಯು ಹೊಂದಿದ್ದಾರೆ, ಅವರು ಅವರ ಅನುಭವವನ್ನು ಹೇಳಲು ಸಾಧ್ಯವಿಲ್ಲ. ಯಾರು ಜನ್ಮ ತೆಗೆದುಕೊಳ್ಳುತ್ತಾರೆ, ಅವರಿಗೆ ಅವರ ಹಿಂದಿನ ಅವಸ್ಥೆ, ಸ್ಥಿತಿಯು ತಿಳಿದಿರುವುದಿಲ್ಲ. ಮೊದಲಿನ ಹಾಗೂ ಮೃತ್ಯುವಿನ ನಂತರದ ಅವಸ್ಥೆಯನ್ನು ಯಾರೂ ತಿಳಿದಿಲ್ಲ. ಹಾಗಾಗಿ ಮೃತ್ಯುವಿನ ಮೊದಲು, ಮೃತ್ಯುವಿನ ವೇಳೆಯಲ್ಲಿ ಹಾಗೂ ಮೃತ್ಯುವಿನ ನಂತರ ಯಾವ ದಿಕ್ಕಿನೆಡೆಗೆ ಸಾಗಬೇಕಾಗುತ್ತದೆ ಎನ್ನುವುದರ ರಹಸ್ಯವು ಸರಿಯಾಗಿ ತಿಳಿಯಲು ಸಿಗುವುದಿಲ್ಲ. ದಾದಾಶ್ರೀಯವರು ತಮ್ಮ ಜ್ಞಾನದಿಂದ ಅವಲೋಕನೆ ಮಾಡಿ ಈ ಎಲ್ಲಾ ರಹಸ್ಯಗಳನ್ನು ಹೇಗಿದೆಯೋ ಹಾಗೆ ಯಥಾರ್ಥವಾಗಿ ಬಹಿರಂಗಪಡಿಸಿದ್ದಾರೆ. ಅವುಗಳ ಸಂಕಲನವನ್ನು ಇಲ್ಲಿ ಪ್ರಕಟಿಸಲಾಗಿದೆ.
Reviews
There are no reviews yet.