Additional information
Category | |
---|---|
Author | |
Publisher | |
Language | Kannada |
ISBN | 978-93-81822-73-9 |
Book Format | Printbook |
₹150.00 Original price was: ₹150.00.₹135.00Current price is: ₹135.00.
ಮೊಲೆವಾಲು ನಂಜಾಗಿ
ಕತೆಗಳು
ಶ್ರೀ ಮಲ್ಲಿಕಾರ್ಜುನ ಹಿರೇಮಠ
‘‘ಮೊಲೆವಾಲು ನಂಜಾಗಿ….’’ ಎಂಬ ಈ ಕಥಾ ಸಂಕಲನದ ತಲೆ ಬರಹವನ್ನು ಅವರು ಬಸವಣ್ಣನವರ ಒಂದು ವಚನದಿಂದ ಆಯ್ದುಕೊಂಡಿದ್ದಾರೆ. ಅಲ್ಲದೆ ಆ ಹೆಸರಿನ ಕಥೆಯೊಂದು ಈ ಸಂಕಲನದ ಕೇಂದ್ರದಲ್ಲಿಯೇ ಇದೆ. ‘‘ಅವನತಿ’’ ಕಥೆಯು ಮೇಲ್ನೋಟಕ್ಕೆ ಒಂದು ಗ್ರಾಮೀಣ ಪ್ರದೇಶದಲ್ಲಿಯ ಕಾಲೇಜಿನಲ್ಲಿ ನಡೆಯುವ ವಿದ್ಯಮಾನದಂತೆ ತೋರುತ್ತದೆ. ‘‘ತಯಾರಿ’’ ಕಥೆಯು ಹೆಚ್ಚು ಜಟಿಲವಾಗಿದ್ದು ಕಥೆಯು ಸ್ತ್ರೀ ಕೇಂದ್ರಿತವಾಗಿದೆ. ವಿಧವೆಯೊಬ್ಬಳು ಮರುಮದುವೆಯಾಗಿದ್ದಾಳೆ. ಅವಳ ಮನೆಯವರ ವಿರೋಧದಿಂದಾಗಿ ಮತ್ತು ಗಂಡನ ತಂದೆ-ತಾಯಿಗಳಿಗೆ ಈ ಮದುವೆ ಸ್ವೀಕೃತವಾಗಿಲ್ಲವಾದುದರಿಂದ, ಪ್ರೀತಿಯ ಆಧಾರವೊಂದರಲ್ಲಿಯೇ ಅವರು ಬಾಳಬೇಕಾಗಿದೆ. ಆದರೆ ಪ್ರೀತಿಯೊಂದೇ ಆಧಾರವಾಗಿ ಬಾಳಬೇಕಿದ್ದ ಮಹಿಳೆಯು ತನ್ನ ಗಂಡನನ್ನೇ ಅರ್ಥಾತ್ ತನ್ನ ಪ್ರೀತಿಯನ್ನೇ ಕಳೆದುಕೊಂಡಾಗ ಬದುಕಲು ಅವಳು ಮಾಡಿಕೊಳ್ಳಬೇಕಾದ ಸಿದ್ಧತೆಯೇ ಈ ಕಥೆಯ ವಸ್ತು. ಸಂಕಲನದ ಕೊನೆಯ ಕಥೆ ‘‘ಮಾಗಿ’’ ಸ್ವಲ್ಪ ದೀರ್ಘವಾದ ಕತೆಯೆ. ಮೂವರು ಮಿತ್ರರು ಒಂದು ಪ್ರವಾಸದಲ್ಲಿ ತಮ್ಮನ್ನೇ ತಾವು ಗುರುತಿಸಿಕೊಳ್ಳುವ ವಿಧಾನವನ್ನು ಕುರಿತು ಕಥೆಯು ಚಿಂತಿಸುತ್ತದೆ.
Category | |
---|---|
Author | |
Publisher | |
Language | Kannada |
ISBN | 978-93-81822-73-9 |
Book Format | Printbook |
Only logged in customers who have purchased this product may leave a review.
Reviews
There are no reviews yet.