Additional information
Category | |
---|---|
Author | |
Publisher | |
Language | Kannada |
Book Format | Printbook |
$2.88 Original price was: $2.88.$2.31Current price is: $2.31.
ಮಠದ ಹೋರಿ ಮತ್ತು ಈವರೆಗಿನ ಕತೆಗಳು
ವರ್ತಮಾನದಲ್ಲಿ ವೇಶ್ಯಾವೃತ್ತಿಯ ವಿವಿಧ ಕೋನಗಳನ್ನು ಅದರ ಮಾನವೀಯ ಆಯಾಮಗಳ ಸಮೇತ ಆ ಕಾದಂಬರಿ ಕಟ್ಟಿಕೊಡುತ್ತಿದೆ. ವೇಶಾವೃತ್ತಿಯ ಸುಳಿಗೆ ಸಿಕ್ಕಿರುವ ಹಲವು ಬಗೆಯ ನಹಿಳೆಯರಿಗೆ ಆ ಕಾದಂಬರಿಯ ಮುಖ್ಯ ಪಾತ್ರದ ಪರಿಧಿಯ ಸುತ್ತ ಬಂದು ಹೋಗುವ ಹಾಗೆ ಅದು ಚಿತ್ರಣಗೊಂಡಿದೆ. ಕಾಬಂದಬರಿಯ ಶಿಲ್ಪ ಸಾಕ್ಷ್ಯಚಿತ್ರದ ಮಾದರಿಯನ್ನು ಅನುಸರಿಸಿದಂತೆ ಕಂಡರೂ ಆ ಕಥನದಲ್ಲಿ ಬರುವ ಸನ್ನಿವೇಶಗಳಿಗಿರುವ ಮಾನವೀಯ ಸ್ಪರ್ಶ ಕಥನ ಶೈಥಿಲ್ಯಗಳನ್ನು ಮರೆಸಿ ಮನಮುಟ್ಟುವಂತೆ ಮಾಡಿದೆ.
ಕತೆಯನ್ನು ಹೇಳಲಿಕ್ಕೆ ಬಳಸುತ್ತಿರುವ ವಿಧಾನ ಸ್ವಲ್ಪಮಟ್ಟಿಗೆ ಪ್ರಗತಿಶೀಲರ ಹಾದಿಯಂತೆಯೂ , ಸ್ವಲ್ಪಮಟ್ಟಿಗೆ ದಲಿತ-ಬಂಡಾಯ ಕತೆಗಳ ಹಾದಿಯಂತೆಯೂ ಸಧ್ಯಕ್ಕೆ ಕಂಡುಬರುತ್ತಿದೆ. ಹನುಮಂತ ಹಾಲಿಗೇರಿ ಈ ಹಿಂದೆ ತೊಡಗಿಕೊಂಡಿದ್ದ ಸಾಮಾಜಿಕ ಅಭಿವೃದ್ದಿ ಕ್ಷೇತ್ರದ ಕಾರ್ಯಕರ್ತನ ಧೋರಣೆ, ಈಗ ತೊಡಗಿಕೊಂಡಿರುವ ಪತ್ರಿಕಾ ವರದಿಗಾರನ ಹುಡುಕಾಟದ ದೃಷ್ಟಿಕೋನಗಳೆರಡೂ ಈತನ ಕಥನ ಕಲೆಯಲ್ಲಿ ದಟ್ಟವಾಗಿ ಬೆರೆತುಕೊಂಡಿವೆ. ಹಾಗಾಗಿ ಕತೆ ಹೇಳುವಾಗ ಅದರಲ್ಲಿನ ದಮನಿತ ಪಾತ್ರಗಳ ಬಗ್ಗೆ ಸಹಾನುಭೂತಿ, ಪತಿತರನ್ನು ಪಾಪಿಗಳೆಂದು ನೋಡದಿರುವ ಪ್ರಗತಿಪರ ದೃಷ್ಟಿಕೋಣ ಕತೆಯ ನಿರೂಪಣೆಯಲ್ಲಿ ಚುರುಕಾದ ನಡಿಗೆ ಹಾಗೂ ಅಗತ್ಯಾನುಸರ ನಾಟಕೀಯ ತಿರುವು ಮುಂತಾದವುಗಳನ್ನು ಹನುಮಂತ ಮೇಳೈಸಿಕೊಂಡಿರುವುದನ್ನು ಕಾದಂಬರಿಯಲ್ಲಿ ಕಾಣಬಹುದು.
Category | |
---|---|
Author | |
Publisher | |
Language | Kannada |
Book Format | Printbook |
Only logged in customers who have purchased this product may leave a review.
Reviews
There are no reviews yet.