ಕುಮಾರವ್ಯಾಸನ ಕರ್ಣಾಟಭಾರತ ಕಥಾಮಂಜರಿ ಪ್ರವೇಶ
ಕುಮಾರವ್ಯಾಸ
ಕುಮಾರವ್ಯಾಸ ಎಂಬ ಕಾವ್ಯನಾಮದ ಇವನ ನಿಜವಾದ ಹೆಸರು ನಾರಣಪ್ಪ. ಇವನ ಕಾಲವನ್ನು ಸು. ೧೫ನೇ ಶತಮಾನವೆಂದು ವಿದ್ವಾಂಸರು ಊಹಿಸಿದ್ದಾರೆ; ಲಭ್ಯ ದಾಖಲೆಗಳ ಪ್ರಕಾರ, ಕ್ರಿ.ಶ. ೧೪೨೩ಕ್ಕಿಂತ ಹಿಂದಿನವನು. ವ್ಯಾಸಭಾರತವನ್ನು ಅನುಸರಿಸಿ ಇವನು ತನ್ನ ಕನ್ನಡ ಭಾರತವನ್ನು ರಚಿಸಿರುವುದರಿಂದ ಕುಮಾರವ್ಯಾಸ ಎಂಬ ಹೆಸರು ಇವನಿಗೆ ಅನ್ವರ್ಥಕ. ಭಾಮಿನಿ ಷಟ್ಪದಿಯಲ್ಲಿ ರಚಿಸಿದ ‘ಕರ್ಣಾಟ(ಕ) ಭಾರತ ಕಥಾಮಂಜರಿ’ ಎಂಬ ಹೆಸರಿನ ಇವನ ಕಾವ್ಯಕೃತಿಗೆ ‘ಕನ್ನಡ ಭಾರತ’, ‘ಗದುಗಿನ ಭಾರತ’ ಎಂಬ ಹೆಸರುಗಳೂ ಇವೆ. ಇದರಲ್ಲಿ ಮಹಾಭಾರತದ ಮೊದಲ ಹತ್ತು ಪರ್ವಗಳ ಕಥಾನಕವು ಅಡಕವಾಗಿದೆ. ಕುಮಾರವ್ಯಾಸನ ಜನ್ಮಸ್ಥಳ ಗದಗ ಜಿಲ್ಲೆಯ ಕೋಳಿವಾಡ. ಇವನು ಗದುಗಿನ ವೀರನಾರಾಯಣನ ಭಕ್ತ; ಗದುಗಿನ ನಾರಣಪ್ಪನೆಂದು ಪ್ರಸಿದ್ಧ. ಈತ ವಿಜಯನಗರದ ಆಳ್ವಿಕೆಯಲ್ಲಿ ಗಜ ಸೇನಾಪತಿಯಾಗಿದ್ದಿರಬಹುದು ಎಂದು ವಿದ್ವಾಂಸರ ಊಹೆ. ‘ಐರಾವತ’ ಎನ್ನುವ ಇನ್ನೊಂದು ಕಾವ್ಯ ಬರೆದಿದ್ದಾನೆಂಬ ಅಭಿಪ್ರಾಯವೂ ಇದೆ. ಕಾವ್ಯ ವಾಚನಾದಿ ಸಂಪ್ರದಾಯಗಳ ಮೂಲಕ ತುಂಬ ಜನಪ್ರಿಯನಾಗಿರುವ ಕವಿ ಈತ.
ಕುಮಾರವ್ಯಾಸಭಾರತ ಕುರಿತ ಮುಖ್ಯ ಕೃತಿಗಳು
ಕೃತಿ ಸಂಪಾದನೆ:
ಕುಮಾರವ್ಯಾಸ ಮಹಾಕವಿಯ ಕರ್ನಾಟಭಾರತ ಕಥಾಮಂಜರಿ
(ಸಂಪಾದಕರು: ಕುವೆಂಪು ಮತ್ತು ಮಾಸ್ತಿ ವೆಂಕಟೇಶ ಅಯ್ಯಂಗಾರ್)
ಕುಮಾರವ್ಯಾಸ ಭಾರತ (ಗದುಗಿನ ಭಾರತದ ಗದ್ಯಾನುವಾದ): ಎನ್ಕೆ
ಪುಸ್ತಕಗಳು:
ಕುಮಾರವ್ಯಾಸ, ಎಸ್.ವಿ. ರಂಗಣ್ಣ
ಕುಮಾರವ್ಯಾಸನ ಶೈಲಿ, ಎಸ್.ವಿ. ರಂಗಣ್ಣ
ಕುಮಾರವ್ಯಾಸಪ್ರಶಸ್ತಿ
ಕನ್ನಡ ಸಾಹಿತ್ಯ ಚರಿತ್ರೆ, ಕುಮಾರವ್ಯಾಸ, ರಂ.ಶ್ರೀ. ಮುಗಳಿ
ಕನ್ನಡ ಭಾರತದಲ್ಲಿ ಶೃಂಗಾರ ಸನ್ನಿವೇಶಗಳು (ಕಾವ್ಯಸಮೀಕ್ಷೆ) ತೀ.ನಂ. ಶ್ರೀಕಂಠಯ್ಯ
ಕುಮಾರವ್ಯಾಸ – ಕವಿ-ಕಾವ್ಯ ಪರಂಪರೆ, ಸಂ: ವಿ.ಸೀ.
ಕುಮಾರವ್ಯಾಸ, ಕೀರ್ತಿನಾಥ ಕುರ್ತಕೋಟಿ
ಸಾಮಾನ್ಯನಿಗೆ ಸಾಹಿತ್ಯ ಚರಿತ್ರೆ, ಷಟ್ಪದಿ ಕಾವ್ಯಗಳು
ಕನ್ನಡ ಭಾರತ, ಸಂ: ಎ.ವಿ. ಪ್ರಸನ್ನ
Reviews
There are no reviews yet.