Ebook

ಕೌದಿ

Author: Kalmesh Totad

Original price was: ₹85.00.Current price is: ₹51.00.

ಕೌದಿ ಹೊಂಗನಸುಗಳ ಹೊದಿಕೆ
ಈ ಪುಸ್ತಕವು ಕಲ್ಮೇಶ ತೋಟದ ಅವರ ಮೊದಲ ಕವನ ಸಂಕಲನವಾಗಿದೆ.

ಮುನ್ನುಡಿ

ಕಾವ್ಯವೊಂದು ಸುದೀರ್ಘ ಪಯಣ…
ಶ್ರೀ ಕಲ್ಮೇಶ ತೋಟದ ಅವರು ಈದೀಗ ಉದಯಿಸುತ್ತಿರುವ ನವೀನ ಕವಿ-ತಾರೆ. ಕನ್ನಡ ಆಧುನಿಕ ಸಾಹಿತ್ಯಾದಗಸದಲ್ಲಿ ಲಕ್ಷಾಂತರ ಯುವಕವಿಗಳ ತಾರಾಮಂಡಲಗಳಿವೆ. ಕವಿಯನ್ನು ತಾರೆಗೆ ಹೋಲಿಸುವುದೇ ಅನ್ವರ್ಥಕ. ಹಾಗೇ ಸೂರ್ಯನೂ ಒಂದು ಅತ್ಯಂತ ಪ್ರಕಾಶಮಾನ ತಾರೆ. ತಮ್ಮ ತಮ್ಮ ಕಾವ್ಯಶಕ್ತಿಯಿಂದಲೇ ಪ್ರಕಾಶಿಸುವ ಹೊಸ ಕವಿಗಳ ಸಂಖ್ಯೆ ಇಂದು ಬಹು ದೊಡ್ಡದಿದೆ. ಕನ್ನಡ ಸಾಹಿತ್ಯದ ಇತಿಹಾಸದಲ್ಲಿ ಇದೊಂದು ಹೆಮ್ಮೆ ಪಡಬೇಕಾದ ಕಾವ್ಯಸಿರಿಯ ಅಧ್ಯಾಯ. ಈ ತಾರಾಪುಂಜಕ್ಕೆ ಶ್ರೀ ಕಲ್ಮೇಶ ತೋಟದ ಅವರನ್ನು ಸ್ವಾಗತಿಸೋಣ.
ಕಲ್ಮೇಶರವರ ಪ್ರಥಮ ಕವಿತಾ ಸಂಗ್ರಹ ‘ಕೌದಿ’ ಯಲ್ಲಿಯ ಅರವತೈದು ಕವಿತೆಗಳನ್ನು ಓದಲು ನನಗೆ ಒಪ್ಪಿಸಿ ಅಭಿಪ್ರಾಯ ತಿಳಿಸಲು ಕೇಳಿದ್ದರಿಂದ ಈದೀಗ ನಾಲ್ಕು ಮಾತುಗಳನ್ನು ಬರೆಯಲು ಬಯಸುತ್ತೇನೆ. ನನ್ನ ಈ ಲೇಖನವು ಖಂಡಿತವಾಗಿಯೂ ವಿಮರ್ಶೆಯಲ್ಲ. ಇದು ಸಾಮಾನ್ಯ ಓದುಗಳ ಪ್ರತಿಕ್ರಿಯೆ ಅಷ್ಟೇ. ಇದು ಕಲ್ಮೇಶರವರ ಪ್ರಥಮ ಕೃತಿಯಾದ್ದರಿಂದ ಇಲ್ಲಿಯ ಕವಿತೆಗಳು ಮೊಗ್ಗಿನಾವಸ್ಥೆಯಲ್ಲಿದ್ದು ಅರಳಬಯಸುತ್ತವೆ. ಬಾಲ್ಯದ ನೆನಪುಗಳಿಂದ ಪ್ರಾರಂಭವಾಗುವ ಇವರ ಕವಿತಾ ಸರಣಿ ತನ್ನ ತಾರುಣ್ಯ, ತನ್ನ ಗೆಳೆಯರು, ಊರು ನಂತರ ಸಮಾಜ ಮತ್ತು ಸಾಂಸ್ಕೃತಿಕ ಸಂದರ್ಭಗಳ ಮುಖ್ಯ ಪ್ರವಾಹದಲ್ಲಿ ತೇಲುವ ಹೂಗಳಂತಿರುವ ಗೆಳತಿಯರಿಗಾಗಿ ಹಂಬಲಿಸಿ ಬರೆದ ಕವಿತೆಗಳು ಇಲ್ಲಿವೆ. ಹೀಗೆ ವೈಯಕ್ತಿಕ, ಪಾರಸರಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ವಲಯಗಳಲ್ಲಿಯ ಅನುಭವಗಳನ್ನು ಜೋಡಿಸಿಕೊಂಡದ್ದರಿಂದ ಕೌದಿಯಂತೆ ಭಾಸವಾಗುತ್ತದೆ. ಈಗಾಗಲೇ ಈ ಶೀರ್ಷಿಕೆಯು ಬೇರೆ ಕವಿತಾ ಸಂಗ್ರಹಗಳ ಶೀರ್ಷಿಕೆಯೂ ಆಗಿದೆಯಾದ್ದರಿಂದ ನಾನು ಹೆಚ್ಚು ಅಚ್ಚರಿಪಡಲಿಲ್ಲ.
ಎರಡು ಮೂರು ಕವಿತೆಗಳನ್ನು ಬಿಟ್ಟರೆ ಉಳಿದೆಲ್ಲವೂ ಚಿಕ್ಕ ಚಿಕ್ಕ ಚೌಪದಿಗಳೆ. ಪ್ರಾಸದ ಗೊಡವೆ ಇಲ್ಲಿಲ್ಲ, ಹೊಸ ಪದಗಳ ಪ್ರಯೋಗವಿಲ್ಲ ಮತ್ತು ಉಪಮೆ-ರೂಪಕಗಳು ಅಲ್ಲಲ್ಲಿ ಕಾಣಬರುತ್ತವೆ. ಆದರೆ, ಸರಳ, ನಿರರ್ಗಳ ಭಾಷೆಯು ನಿಲ್ಲದ ಹಳ್ಳದಂತೆ ಸರಾಗವಾಗಿ ಸಾಗುತ್ತದೆ………..

ಮಾಲತಿ ಪಟ್ಟಣಶೆಟ್ಟಿ
ಧಾರವಾಡ

Additional information

Category

Author

Publisher

Language

Kannada

Book Format

Ebook

Reviews

There are no reviews yet.

Only logged in customers who have purchased this product may leave a review.