ಕನ್ನಡವೆಂದರೆ ಬರಿ ನುಡಿಯಲ್ಲ.
ಲೇ: ಡಾ| ಎಸ್.ವಿ.ಪ್ರಭಾವತಿ
ವಿಷಯ,ವಸ್ತು ಯಾವುದೇ ಇರಲಿ ಅದನ್ನು ಆಳವಾಗಿ ಅಭ್ಯಸಿಸಲು ಹೊರಟಾಗ ಆನಂದಕ್ಕೆ ಪಾರವೇ ಇರುವದಿಲ್ಲ.ಆಳಕ್ಕಿಳಿದಷ್ಟು ರುಚಿ ಬಹಳ.ನಾವೆಲ್ಲರು ಪಂಪನನ್ನು ಕನ್ನಡದ ಆದಿಕವಿ ಎಂದು ನಂಬಿದ್ದೇವೆ.ಓದಿದ್ದೇವೆ. ಆದರೆ ಲೇಖಕರ ಅಭಿಪ್ರಾಯದ ಪ್ರಕಾರ ಪಂಪನಿಗಿಂತ ಮೊದಲು ಕನ್ನಡ ಭಾಷೆಗಾಗಿ ಶ್ರಮಿಸಿದ ಎಷ್ಟೋ ಕವಿಗಳು, ಲೇಖಕರು ಇರಬಹುದು, ಉಲ್ಲೇಖವಿಲ್ಲದಿರುವ ಅಂತಹ ವ್ಯಕ್ತಿಗಳ ಬಗ್ಗೆ ವಿಷಾದ ವ್ಯಕ್ತ ಪಡಿಸುತ್ತಾರೆ.
ಹಳಗನ್ನಡ ದಿಂದ ಇಂದಿನ ಸ್ಟ್ಯಾಂಡರ್ಡ ಕನ್ನಡದವರೆಗು ಬದಲಾವಣೆಗಳನ್ನು ಇಲ್ಲಿ ತೋರಿಸಿಕೊಟ್ಟಿದ್ದಾರೆ .ರಾಜಬದ್ಧ ಕವಿಗಳಿಂದ ದೇವಬದ್ಧ ಕವಿಗಳವರೆಗೆ, ಜಾನಪದ ಸಾಹಿತ್ಯದಿಂದ ನವೀನ ಸಾಹಿತ್ಯದವರೆಗೆ ಆಳವಾಗಿ ಅಭ್ಯಸಿಸಿ ಸಮರ್ಥವಾಗಿ ಬಿಂಬಿಸಿದ್ದಾರೆ. ಅಷ್ಟೇ ಅಲ್ಲದೆ ಆಯಾ ಕಾಲದ ಪ್ರಕಾರ ಸಮಾಜದ ಧೋರಣೆಯ ಬಗ್ಗೆ ಚಿತ್ರಸಿದ್ದಾರೆ. ಸ್ತ್ರೀ ಚಿಂತನೆ, ದಲಿತ ಮತ್ತು ಹಿಂದುಳಿದ ವರ್ಗದ ಬಗೆಗಿನ ವಿವರಣೆ ನೀವು ಈ ಪುಸ್ತಕದಲ್ಲಿ ಕಾಣಬಹುದು.