Ebook

ಕಾಡು ತೋಟ

Original price was: $2.64.Current price is: $1.59.

ರಾಸಾಯನಿಕ ವಿಷವರ್ತುಲದಲ್ಲಿ, ಏಕಜಾತಿಯ ತೋಟಗಾರಿಕೆಯಲ್ಲಿ ಬಳಲಿದವರ ಮನಸ್ಸು ಬದಲಿಸುವ ಶಕ್ತಿ ಸಸ್ಯವೈವಿಧ್ಯದ ಕಾಡುತೋಟಕ್ಕಿದೆ. ಸಾವಯವದ ಸಹಜತೆಯನ್ನು ಕಳವೆಯ ಕಾಡು ಕಣ್ಣಲ್ಲಿ ವಿವರಿಸುವ ಶಿವಾನಂದರ ಈ ಕೃತಿ ನಾಳಿನ ಕೃಷಿ ಬದುಕಿಗೆ ಬೆಳಕು. ಕಾಡುತೋಟದ ಆಸಕ್ತರಿಗೆ ಕೈದೀವಿಗೆ.

ಕರೋನ ಸಂಕಷ್ಟದಿಂದ ನಗರ ಬಿಟ್ಟು ಕೃಷಿಯತ್ತ ಹೊರಟವರ ಸಾಲು ಹೆಚ್ಚುತ್ತಿದೆ. ಒಂದು ಎಕರೆಯಲ್ಲಿ ಹಲವು ಜಾತಿಯ ಹಣ್ಣಿನ ಬೆಳೆ ಪಡೆಯುವ ಕನಸು ಅವರದು. ಮರದ ನೆರಳಲ್ಲಿ, ಕಾಡಿನ ಪ್ರಶಾಂತ ವಾತಾವರಣದಲ್ಲಿ ಬದುಕುವ ಆಸೆ ಚಿಗುರುತ್ತಿದೆ. ಕಾಡು ತೋಟ ಇವರಿಗೆಲ್ಲ ಕಲಿಕಾ ಶಾಲೆ. ಸಸ್ಯ ಪ್ರೀತಿಯ ಸಂತತಿ ಹೆಚ್ಚುತ್ತಿರುವಾಗ ಕಾಡು ಸೂತ್ರದ ಮೂಲಕ ಕೃಷಿ ಕಟ್ಟುವ ಅರಿವು ಪಡೆಯಲು ಸಹಾಯಕವಾಗುವಂತೆ ಪುಸ್ತಕ ರಚನೆಯಾಗಿದೆ. ಕೇವಲ ಮೂರು ಇಂಚು ಮಣ್ಣಿನ ತೇವದಲ್ಲಿ ನಮ್ಮ ಆಹಾರ ಬೆಳೆಗಳ ಭವಿಷ್ಯ ಅಡಗಿದೆ. ನಿರಂತರ ಅರಣ್ಯನಾಶದಿಂದ ಮಣ್ಣಿನ ಸ್ವರೂಪ ಬದಲಾಗಿದ್ದು ಪುನಃ ಉತ್ತಮ ಸ್ಥಿತಿಗೆ ಮರಳಲು ಆಳಕ್ಕೆ ಬೇರಿಳಿಸುವ ಕಾಡು ತೋಟದ ನೀತಿ ಕೃಷಿಕರ ಅಕ್ಕರೆಯ ಮಾರ್ಗವಾಗಬೇಕಿದೆ.
‘ಕಾಡು ತೋಟ- ಆರೋಗ್ಯ ಭಾಗ್ಯದ ಅನ್ನದ ತಟ್ಟೆ’ ಕೃತಿ ರಚನೆಗೆ ನೆಲದ ಸಸ್ಯ ಪ್ರೀತಿಯ ಕಾರಣಗಳಿವೆ. ಇಂದು ಎಲ್ಲರಲ್ಲಿ ಆರೋಗ್ಯ ಕಾಳಜಿ ಮೂಡಿದೆ. ಸಾವಯವ ಆಹಾರ, ವಿಷಮುಕ್ತ ಆಹಾರ, ಆಯುರ್ವೇದ, ನಿಸರ್ಗ ಚಿಕಿತ್ಸೆಗಳ ವಹಿವಾಟು ಹೆಚ್ಚುತ್ತಿದೆ. ಸರಕಾರದ ನೀತಿಗಳೂ ಬದಲಾಗಿ ಅರಣ್ಯ ಕೃಷಿಗೆ ಪ್ರೋತ್ಸಾಹ ಕಾರ್ಯಕ್ರಮಗಳು ಜಾರಿಯಾಗಿವೆ. ಹತ್ತು ಎಕರೆ ಭೂಮಿಯಿದ್ದವರು ಎರಡು ಎಕರೆಯಾದರೂ ಕಾಡು ತೋಟದತ್ತ ಹೆಜ್ಜೆ ಹಾಕಿದರೆ ಬಹುದೊಡ್ಡ ಪರಿಸರ ಬದಲಾವಣೆ ಸಾಧ್ಯವಿದೆ.
ರಾಸಾಯನಿಕ ವಿಷವರ್ತುಲದಲ್ಲಿ, ಏಕಜಾತಿಯ ತೋಟಗಾರಿಕೆಯಲ್ಲಿ ಬಳಲಿದವರ ಮನಸ್ಸು ಬದಲಿಸುವ ಶಕ್ತಿ ಸಸ್ಯವೈವಿಧ್ಯದ ಕಾಡುತೋಟಕ್ಕಿದೆ. ಸಾವಯವದ ಸಹಜತೆಯನ್ನು ಕಳವೆಯ ಕಾಡು ಕಣ್ಣಲ್ಲಿ ವಿವರಿಸುವ ಶಿವಾನಂದರ ಈ ಕೃತಿ ನಾಳಿನ ಕೃಷಿ ಬದುಕಿಗೆ ಬೆಳಕು. ಕಾಡುತೋಟದ ಆಸಕ್ತರಿಗೆ ಕೈದೀವಿಗೆ.

Additional information

Author

Publisher

Book Format

Ebook

Language

Kannada

Pages

168

Year Published

2020

Category

Reviews

There are no reviews yet.

Only logged in customers who have purchased this product may leave a review.