ಮನುಷ್ಯನ ಶ್ರೇಯಸ್ಸಿಗೆ ಕಾರಣವಾದದ್ದು ಧರ್ಮ, ಆ ಧರ್ಮವನ್ನು ಶಾಸ್ತ್ರವಿಹಿತವಾದ ಕಾಲದಲ್ಲಿ ಅನುಷ್ಠಿಸಬೇಕು. ಕಾಲವನ್ನು ತಿಳಿಸಲು ಜ್ಯೋತಿಷ್ಯ ಶಾಸ್ತ್ರವು ಆವಿರ್ಭವಿಸಿದೆ. ವೇದಾಂಗಗಳಲ್ಲಿ ಜ್ಯೋತಿಷ್ಯವು ಪ್ರಮುಖವಾದ ಸ್ಥಾನವನ್ನು ಪಡೆದಿದೆ. ಸೂರ್ಯನ ಗತಿಯನ್ನು ಆಧರಿಸಿ ಪ್ರವೃತ್ತವಾದ ಈ ಶಾಸ್ತ್ರವು ಗ್ರಹಣ, ಸಂಕ್ರಮಣ ಮೊದಲಾದ ದಿನಗಳನ್ನು ತಿಳಿಯಲು ಸಹಕಾರಿಯಾಗಿದೆ. ಇತರ ಗ್ರಹಗಳ ಗತಿ, ಮನುಷ್ಯನ ಜನ್ಮ ಸಮಯಕ್ಕನುಗುಣವಾಗಿ ಆಯಾ ಗ್ರಹಗಳು ನೀಡುವ ಶುಭಾಶುಭ ಫಲಗಳು, ಅಶುಭ ಫಲ ನಿವಾರಣೆಗಾಗಿ ಪರಿಹಾರಗಳು ಹೀಗೆ ಹಲವು ವಿಷಯಗಳನ್ನು ತಿಳಿಸುವ ಅನೇಕ ಗ್ರಂಥಗಳನ್ನೊಳಗೊಂಡ ಈ ಜ್ಯೋತಿಷ್ಯಶಾಸ್ತ್ರವು ಇಂದು ಬೃಹತ್ತಾಗಿ ಬೆಳೆದಿದೆ.ಈ ಪುಸ್ತಕದ ಹೆಸರು “ಜ್ಯೋತಿಷ್ಯ ಪ್ರಕಾಶ”. ಆದರೆ ಕೊಟ್ಟಿರುವ ಮಾಹಿತಿಯೆಲ್ಲ ವ್ಯಾವಹಾರಿಕ ಜೀವನದ ಸಮಸ್ಯೆಗಳನ್ನು ಬಗೆಹರಿಸಲು ಅದು ಕೊಟ್ಟಿರುವ ಹತ್ತು ಹಲವು ವಿಧಾನಗಳು! ದೀಪದ ಮಹಿಮೆ, ಸಂಖ್ಯೆಗಳಿಂದಾಗುವ ಅದ್ಭುತಗಳು. ಕನಸಿಗೂ ಧನಸಂಪಾದನೆಗೂ ಇರುವ ಸಂಬಂಧ. ಹೃದಯಾಘಾತದಿಂದ ಪಾರಾಗಲು ಯಾವ ಗ್ರಹದ ಪೂಜೆ, ರಾಶಿಗೆ ತಕ್ಕ ಹಣ್ಣುಹಂಪಲುಗಳು, ಪರೀಕ್ಷೆಯ ಭಯಕ್ಕೂ ಜನ್ಮರಾಶಿಗೂ ಇರುವ ಸಂಬಂಧ ಮತ್ತು ಪರಿಹಾರ, ಕಟ್ಟಕಡೆಗೆ ಯಾವ ಬಣ್ಣದ ಮೊಬೈಲನ್ನು ಆರಿಸಿದರೆ ಅದು ಕಳೆದುಹೋಗುವ ಸಂಭವ ಇರದು(!) – ಇತ್ಯಾದಿ ಅತಿ “ಗಹನವಾದ” ವಿಷಯಗಳ ಬಗ್ಗೆ ವಿಶೇಷ ಜ್ಞಾನ – ಇವು ಈ ಗ್ರಂಥದ ಸೊಗಸು!
ಶ್ರೀ ಪ್ರಕಾಶಬಾಬು ಅವರು ಉಪಯುಕ್ತವಾದ ಜ್ಯೋತಿಷ್ಯ ವಿಷಯಗಳನ್ನು ಸಂಗ್ರಹಿಸಿ ‘ಜ್ಯೋತಿಷ್ಯ ಪ್ರಕಾಶ’ ಎಂಬ ಗ್ರಂಥವನ್ನು ರಚಿಸಿದ್ದಾರೆ.
-20%
Ebook
ಜ್ಯೋತಿಷ್ಯ ಪ್ರಕಾಶ
Author: K.R. Prakash Babu
Original price was: $1.92.$1.54Current price is: $1.54.
ಶ್ರೀ ಪ್ರಕಾಶಬಾಬು ಅವರು ಉಪಯುಕ್ತವಾದ ಜ್ಯೋತಿಷ್ಯ ವಿಷಯಗಳನ್ನು ಸಂಗ್ರಹಿಸಿ ‘ಜ್ಯೋತಿಷ್ಯ ಪ್ರಕಾಶ’ ಎಂಬ ಗ್ರಂಥವನ್ನು ರಚಿಸಿದ್ದಾರೆ.
About this Ebook
Information
Additional information
Author | |
---|---|
Publisher | |
Book Format | Ebook |
Language | Kannada |
ISBN | 978-81-935820-7-7 |
Pages | 224 |
Year Published | 2018 |
Category |
Reviews
Only logged in customers who have purchased this product may leave a review.
Reviews
There are no reviews yet.