ಇರಾವತಿ ಕರ್ವೆಯವರು ಭಾರತದ ಪ್ರಥಮ ಮಾನವಶಾಸ್ತ್ರಜ್ಞೆ. ಭಾರತೀಯ ವಿಶ್ವವಿದ್ಯಾಲಯಗಳಲ್ಲೂ ಮಾನವಶಾಸ್ತ್ರ ಎಂದರೆ ಏನು ಎಂದು ಕೇಳುವ ಸಮಯದಲ್ಲಿ ಇರಾವತಿಯವರು ಜರ್ಮನಿಯ ಕೈಸರ್ ವಿಲ್ಹೆಲ್ಮ್ ಇನಸ್ಟಿಟ್ಯೂಟ್ ಆಫ್ ಆಂಥ್ರೋಪಾಲಜಿ, ಹ್ಯೂಮನ್ ಹೆರಿಡಿಟಿ ಆಂಡ್ ಯೂಜೆನಿಕ್ಸ್)ಯನ್ನು ಸೇರಿ ಪಿಎಚ್.ಡಿ ಪಡೆಯುತ್ತಾರೆ. ಇರಾವತಿಯವರು ಎಂದಿಗೂ ‘ಆರಾಮ ಕುರ್ಚಿ’ಯ ಸಂಶೋಧಕರಾಗಿರಲಿಲ್ಲ. ಇವರು ತಮ್ಮ ಎಲ್ಲ ಕೆಲಸಗಳನ್ನು ಕ್ಷೇತ್ರಾಧ್ಯಯನದ ಮೂಲಕವೇ ನಡೆಸಿದ್ದು ವಿಶೇಷ. ಪಂಡರಿವಾರಿ ಸಂಸ್ಕೃತಿಯನ್ನು ಅರಿತುಕೊಳ್ಳಲು ಒಂದಲ್ಲ ಹಲವು ಸಲ ಭಕ್ತರ ಜೊತೆಗೆ ಪಂಡರಾಪುರ ಯಾತ್ರೆಯನ್ನು ಕಾಲ್ನಡಿಗೆಯಲ್ಲಿ ನಡೆಸುತ್ತಾರೆ. ಹಳ್ಳಿಗರ ನಡುವೆಯೇ ಉಳಿದು ಅವರ ದೈನಂದಿನ ಬದುಕನ್ನು ಅಧ್ಯಯನ ಮಾಡುವುದರ ಜೊತೆಗೆ ಅವರ ನಂಬಿಕೆ, ಮೂಢನಂಬಿಕೆ, ಭಾಷಾ ವೈಭವ ಸಾಂಸ್ಕೃತಿಕ ಶ್ರೀಮಂತಿಕೆ ಹಾಗೂ ದುರ್ಬಲತೆಗಳನ್ನು ಅಧ್ಯಯನ ಮಾಡುವ ವೈಖರಿ ಮಾದರಿಯಾಗಿದೆ. ಇರಾವತಿ ಕರ್ವೆಯವರ ‘ಯುಗಾಂತ’ ಎನ್ನುವ ಮಹಾಭಾರತ ಸಂಬಂಧಿತ ಸಂಶೋಧನಾ ಪ್ರಬಂಧ, ಪ್ರತಿಯೊಬ್ಬ ಭಾರತೀಯನು ಒಮ್ಮೆಯಾದರೂ ಓದಲೇಬೇಕಾದ ಕೃತಿ.
-10%
Availability: In StockPrintbook
ಇರಾವತಿ ಕರ್ವೆ
Author: Geeta Shenoy
Original price was: ₹30.00.₹27.00Current price is: ₹27.00.
ಇರಾವತಿ ಕರ್ವೆಯವರು ಭಾರತದ ಪ್ರಥಮ ಮಾನವಶಾಸ್ತ್ರಜ್ಞೆ.
About this Printbook
Information
Additional information
Author | |
---|---|
Publisher | |
Book Format | Printbook |
Language | Kannada |
Pages | 48 |
Year Published | 2021 |
Category |
Reviews
Only logged in customers who have purchased this product may leave a review.
Reviews
There are no reviews yet.