Availability: In StockPrintbook

ಇಹದ ಪರಿಮಳ

100.00

ಈ ಸಂಕಲನದಲ್ಲಿ ಒಟ್ಟು 13 ಕತೆಗಳು ಇವೆ. ತನ್ನ ಸುತ್ತಮುತ್ತಲಿನ ಕೃತಕ ಬಂಧಗಳನ್ನು ಮೀರಿ ಮಣ್ಣಿನ ಪರಿಮಳಕ್ಕೆ ಸೋಲುವ ನಾಯಕನ ಕತೆಯನ್ನು ಇಹದ ಪರಿಮಳ ಹೇಳುತ್ತದೆ.

ಇಹದ ಪರಿಮಳ ಕಥೆಯೊಂದರ  ಹೆಸರಾದರೂ, ಈ ಪರಿಮಳದ ಹುಡುಕಾಟ ಸಂಕಲನದಎಲ್ಲ ಕಥೆಗಳಲ್ಲೂ ಒಂದಲ್ಲಾ ಒಂದು ಬಗೆಯಾಗಿ ಕಾಣಿಸುವುದು ವಿಶೇಷ. ಈ ಹೊತ್ತಿನ ಮನುಷ್ಯನ ಬದುಕಿಗೆ ಸಂಬಂಧಿಸಿದ ಹಲವು ಸಂಗತಿಗಳನ್ನು ಶೋದಿಸಲು ಸಮಕಾಲೀನ ಸಂದರ್ಭವನ್ನು ಅರ್ಥ ಮಾಡಿಕೊಳ್ಳ ಲು ಹಲಬಗೆಯ ವಾಸನೆಗಳ ಪಾಕವಾಗಿ ಗಮನಸೆಳೆಯುತ್ತದೆ. ಈ ಸಂಕಲನದಲ್ಲಿ ಒಟ್ಟು 13 ಕತೆಗಳು ಇವೆ. ತನ್ನ ಸುತ್ತಮುತ್ತಲಿನ ಕೃತಕ ಬಂಧಗಳನ್ನು ಮೀರಿ ಮಣ್ಣಿನ ಪರಿಮಳಕ್ಕೆ ಸೋಲುವ ನಾಯಕನ ಕತೆಯನ್ನು ಇಹದ ಪರಿಮಳ ಹೇಳುತ್ತದೆ. ಆ ಪರಿಮಳವನ್ನು ದೂರದಿಂದ ಆಸ್ವಾದಿಸುವುದೇನೋ ಚೆನ್ನಾಗಿಯೇ ಇರುತ್ತದೆ. ಆದರೆ ಆ ಪರಿಮಳಕ್ಕಾಗಿ ತರಬೇಕಾದ ಭೌತಿಕ ಬದುಕನ್ನು ಮೀರುವುದು ಕಷ್ಟ. ಇದು ಕಥಾನಾಯಕ ಅಮೋಘವರ್ಷನ ಒಳಗಿನ ಸಂಘರ್ಷ. ಒಬ್ಬ ನಟ ಬದುಕಿನ ಮೌಲ್ಯಗಳನ್ನು ಅದ್ಭುತವಾಗಿ ನಟಿಸಬಲ್ಲ. ಆದರೆ ಅದನ್ನು ತನ್ನ ಬದುಕಾಗಿಸುವ ಸಂದರ್ಭದಲ್ಲಿ ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ. ಇದೇ ಸಂದರ್ಭದಲ್ಲಿ ‘ಗಂಧದ ಬಾಗಿಲು’ ಇನ್ನೊಂದು ರೀತಿಯಲ್ಲಿ ಮನುಷ್ಯನೊಳಗಿನ ಒಳ ಹೊರಗಿನ ವಾಸನೆಯನ್ನು ತಿಳಿಸುತ್ತದೆ. ಒಂದು ದ್ವೇಷ, ಅಸೂಯೆಯಿಂದ ಕರಟಿದ ಪರಿಮಳ. ಇದೇ ಸಂದರ್ಭದಲ್ಲಿ ಅದರ ಬಾಗಿಲು ಮಾತ್ರ ಗಂಧದ ಪರಿಮಳ ಸೂಸುತ್ತದೆ. ಹೀಗೆ ಭಂಗಿಗಿರಿ, ಮಳೆ ಬೇರೆ ಬೇರೆ ರೀತಿಯಲ್ಲಿ ಇಹದ ವಾಸನೆಗಳ ವೈವಿಧ್ಯಗಳ ಸುತ್ತ ಸುತ್ತುತ್ತವೆ. ಉಳಿದಂತೆ ಕತೆಗಳು ಮನುಷ್ಯನೊಳಗಿನ ನೀಚತನ ಮತ್ತು ಒಳ್ಳೆಯತನಗಳ ತಿಕ್ಕಾಟಗಳನ್ನು ಹೇಳುತ್ತವೆ.

Additional information

Category

Author

Publisher

Book Format

Printbook

Pages

120

Language

Kannada

Year Published

2021

Reviews

There are no reviews yet.

Only logged in customers who have purchased this product may leave a review.