ಮಕ್ಕಳ ಸಾಹಿತ್ಯ ರಚನೆ ಇವರ ಸಾಹಿತ್ಯಕ ಬದುಕಿನ ಆರಂಭದ ವರ್ಷಗಳಿಂದಲೂ ಇವರ ಮನಸ್ಸನ್ನು ಆಕ್ರಮಿಸಿರುವಂಥದ್ದು. ಪ್ರಾಯಃ ಮಕ್ಕಳ ಬಗೆಗೆ ಅವರಿಗಿದ್ದ ಸಹಜವಾದ ಮೋಹವೇ ಅವರ ಈ ಪ್ರವೃತ್ತಿಗೆ ಕಾರಣವಿರಬಹುದು.ಇವರ ಕೆಲವು ಮಕ್ಕಳ ಕೃತಿಗಳ ಮೊದಲ ಓದುಗರು ಅವರ ಮಕ್ಕಳೇ. ಕಥಾ ನಾಯಕರೂ ಅವರ ಮಕ್ಕಳೇ! ೧೯೮೦ರಲ್ಲಿ ಅಮಾನುಷರು ಬರೆದಾಗ ಬರೆದದ್ದನ್ನು ಮೊದಲು ಓದಿದವರು ಆಗ ಹೈಸ್ಕೂಲು ( ೧೯೮೭ ) ಮೆಟ್ಟಿಲು ಹತ್ತಿದ್ದ ಇವರ ಮಕ್ಕಳಷ್ಟೆ ! ಮನೆಯ ಮಕ್ಕಳೊಂದಿಗೆ ಸುತ್ತಮುತ್ತಲ ಮನೆಯ ಮಕ್ಕಳಿಗೂ ಇವರು ಬರೆದದ್ದನ್ನು ಓದಿ , ಓದಿಸಿ ಅವರ ಅಭಿಪ್ರಾಯ ತಿಳಿಯುವುದು ಎಚ್. ಎಸ್. ವೆಂಕಟೇಶಮೂರ್ತಿಯವರ ಪ್ರವೃತ್ತಿಯಾಗಿತ್ತು ! ಅಮಾನುಷರು ( ೧೯೮೦ ) ಕೃತಿಯ ಮುನ್ನುಡಿಯಲ್ಲಿ ಆ ಕಾದಂಬರಿಯನ್ನು ಮೊದಲು ಓದಿ ಮೆಚ್ಚಿದ ಮಕ್ಕಳ ಹೆಸರನ್ನುಇವರು ನಮೂದಿಸಿದ್ದಾರೆ. ಆ ಮಕ್ಕಳೆಲ್ಲಾ ಈಗ ಪ್ರೌಢಾವಸ್ಥೆಯಲ್ಲಿದ್ದಾರೆ.
ಮಕ್ಕಳ ಬೆಳವಣಿಗೆಯನ್ನು ನಾವು ಸಮಗ್ರವಾಗಿ ಕಣ್ಣುಂಬಿಕೊಳ್ಳುವುದು ಮೊಮ್ಮಕ್ಕಳು ಹುಟ್ಟಿ ಅವರು ನಮ್ಮ ಕಣ್ಣೆದುರೇ ಬೆಳೆಯುವಾಗ ! ಈಟಿದ್ದದು ಚೋಟಾಗಿ , ಚೂಟಿದ್ದದ್ದು ಮಾಟಾಗಿ ಮಗುವೊಂದು ಹೂವಿನಂತೆ ಅರಳುವುದು ನಮಗೆ ಪೂರ್ಣ ಪ್ರಮಾಣದಲ್ಲಿ ಅನುಭವವೇದ್ಯವಾಗುವುದು ಮೊಮ್ಮಕ್ಕಳು ಹುಟ್ಟಿದ ಮೇಲೇ ಎಂದು ಆವಾಗಾವಾಗ ಅನ್ನಿಸುತ್ತಲೇ ಇರುತ್ತದೆ ! ಮೊದ ಮೊದಲು ಅಮ್ಮ ಕಥೆ ಹೇಳುವವಳಾಗಿದ್ದಳು . ಅವಳ ಮಕ್ಕಳು ಕಥೆ ಕೇಳುವವರಾಗಿದ್ದರು . ಈಗೀಗ ಅಜ್ಜಿ ಕಥೆ ಹೇಳುವವಳಾಗಿದ್ದಾಳೆ ! ಮೊಮ್ಮಕ್ಕಳು ಕಥೆ ಹೇಳುವವರಾಗಿದ್ದಾರೆ .
Reviews
There are no reviews yet.