ಜೀವನದಾಗ ಒಮ್ಮೆಯೂ ನಗದವನಿಗೆ ಸ್ವರ್ಗ ಸಿಗಲಾರದು” ಎಂದು ಹಿರಿಯರು ಹೇಳುವ ಮಾತು ಸತ್ಯಸ್ಯ ಸತ್ಯ. ನಿತ್ಯದ ಬೇಗುದಿಯನ್ನು ಮರೆತು ಜೀವನದ ನಿರಾಳವಾದ ಮುನ್ನಡೆಗೆ ಹಾಸ್ಯವೆಂಬ ಈ ಗುಳಿಗೆ ಅಗತ್ಯ ಹಾಗೂ ಅನಿವಾರ್ಯ. ಬಿಗಿದ ತುಟಿಗಳನ್ನು ಅರಳಿಸುವ ಈ ನಗು ಎನ್ನುವುದು ಸಂತೃಪ್ತಿಯ ಸಂಕೇತ. ಬದುಕಿನ ವ್ಯಥೆಯನ್ನು ಮರೆಯಲು ನಗು ಸುಲಭವಾದ ಸಾಧನ. ನೋವನ್ನು ಕೂಡ ನಲಿವಾಗಿಸುವ, ಬಂದ ಕಷ್ಟಗಳನ್ನು ನಗುನಗುತ್ತ ಸಹಿಸುವಂತೆ ಮಾಡುವ ಮಾಂತ್ರಿಕ ಸ್ಪರ್ಶ ಈ ನಗುವಿಗಿದೆ. ಅದಕ್ಕೇ ಮನದ ಕೊಳೆ ತೊಳೆದು ಚೈತನ್ಯ ತುಂಬಲು ಮನದುಂಬಿ, ಮನಸಾರೆ ನಗಬೇಕು. ಇದರಲ್ಲಿಯೇ ಬದುಕಿನ ಸಾರ್ಥಕತೆ.
ನಗೆಯ ಬಗೆಗಳು ಹಲವು.. ಮೆಲುನಗೆ, ಮುಗುಳನ್ನಗೆ, ಮುಗ್ಧನಗೆ, ಬಿಚ್ಚುನಗೆ, ಹುಚ್ಚುನಗೆ, ಹುಚ್ಚುಚ್ಚಾರ ನಗೆ, ದೇಶಾವರಿ ನಗೆ, ವ್ಯಂಗ್ಯನಗೆ, ಹೊಗೆಯ ನಗೆ, ಅಟ್ಟಹಾಸದ ನಗೆ ಎಂದು. ನಗೆಯೆಂಬುದು ಒಂದು ಸಾಂಸರ್ಗಿಕ ರೋಗದಂತೆ ಕೆಲಸ ಮಾಡುತ್ತದೆ.
Reviews
There are no reviews yet.