ಗೋಪಾಲಕೃಷ್ಣ ಅಡಿಗರು ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಮೊಗೇರಿ ಎಂಬ ಹಳ್ಳಿಯಲ್ಲಿ ೧೮ ಫೆಬ್ರವರಿ ೧೯೧೮ರಲ್ಲಿ. ತಮ್ಮ ಪ್ರಾರಂಭದ ವಿದ್ಯಾಭ್ಯಾಸವನ್ನು ದಕ್ಷಿಣ ಕನ್ನಡದಲ್ಲಿ ಮುಗಿಸಿ, ಮೈಸೂರು ವಿಶ್ವವಿದ್ಯಾಲಯದಲ್ಲಿ ಬಿ.ಎ. ಆನರ್ಸ್, ಇಂಗ್ಲೀಷ್ ಎಂ.ಎ. ಪದವಿಗಳನ್ನು ಪಡೆದರು. ನಂತರ ಮೈಸೂರಿನ ಶಾರದಾ ಕಾಲೇಜು, ಸೇಂಟ್ ಫ಼ಿಲೊಮಿನಾಸ್ ಕಾಲೇಜು, ಕುಮಟಾ ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಕೆಲಸ ಮಾಡಿದರು. ನಂತರ ಉಡುಪಿಯ ಪೂರ್ಣಪ್ರಜ್ಞ ಕಾಲೇಜು, ಸಾಗರದ ಲಾಲ್ ‌ಬಹದ್ದೂರ್ ಶಾಸ್ತ್ರಿ ಕಾಲೇಜುಗಳಲ್ಲಿ ಪ್ರಾಂಶುಪಾಲರಾಗಿ ಕೆಲಸ ಮಾಡಿದರು. ಮತ್ತು ನ್ಯಾಷನಲ್ ಇನ್ ‌ಸ್ಟಿಟ್ಯೂಟ್ ಆಫ಼್ ಅಡ್ವಾನ್ಸ್ ‌ಡ್ ಸ್ಟಡೀಸ್ ‌ನ ರಿಸರ್ಚ್ ಫ಼ೆಲೋ ಆಗಿ ಕೆಲಸ ಮಾಡಿದರು. ಇವರು ತಮ್ಮ ಹದಿಮೂರನೆಯ ವಯಸ್ಸಿನಲ್ಲಿಯೇ ಭಾಮಿನಿ ಷಟ್ಪದಿ, ವಾರ್ಧಕ ಷಟ್ಪದಿ, ಕಂದಪದ್ಯ ಮತ್ತು ಇತ್ಯಾದಿ ಪದ್ಯರಚನೆಗಳನ್ನು ಶುರುಮಾಡಿದರು. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕಬೀರ್ ಸಮ್ಮಾನ್, ಪಂಪ ಪ್ರಶಸ್ತಿ ಮತ್ತು ಹಲವಾರು ಪಶಸ್ತಿಗಳು ಬಂದಿವೆ. ಹಾಗೂ ಇವರು ೫೧ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರೂ ಆಗಿದ್ದರು. ಅಡಿಗರು ೧೪ ನವಂಬರ್ ೧೯೯೨ರಂದು ನಿಧನಹೊಂದಿದರು.

ಗೋಪಾಲಕೃಷ್ಣ ಅಡಿಗ ಮುಖ್ಯ ಕೃತಿಗಳು ಕವನ ಸಂಕಲನಗಳು:
ಭಾವತರಂಗ, ಕಟ್ಟುವೆವು ನಾವು,
ನಡೆದು ಬಂದ ದಾರಿ,
ಚಂಡೆಮದ್ದಳೆ, ಭೂಮಿಗೀತ,
ವರ್ಧಮಾನ,
ಇದನ್ನು ಬಯಸಿರಲಿಲ್ಲ,
ಮೂಲಕ ಮಹಾಶಯರು,
ಬತ್ತಲಾರದ ಗಂಗೆ,
ಚಿಂತಾಮಣಿಯಲ್ಲಿ ಕಂಡ ಮುಖ
ಸುವರ್ಣ ಪುತ್ಥಳಿ
ಸಮಗ್ರ ಕಾವ್ಯ

ವಿಮರ್ಶಾ ಸಂಕಲನಗಳು:
ಮಣ್ಣಿನ ವಾಸನೆ
ನಮ್ಮ ಶಿಕ್ಷಣ ಕ್ಷೇತ್ರ
ಆಯ್ದ ಬರಹಗಳು
ಸಮಗ್ರ ಗದ್ಯ

ಕಾದಂಬರಿಗಳು:
ಅನಾಥೆ,
ಆಕಾಶದೀಪ

Additional information

Category

Author

Publisher

Book Format

Ebook

Language

Kannada

Reviews

There are no reviews yet.

Only logged in customers who have purchased this product may leave a review.