ಲಿಮರಿಕ್ ಐದು ಸಾಲಿನ ಕವಿತೆಯಾಗಿ ಬಹಳ ಹಿಂದಿನಿಂದಲೂ ಬಳಕೆಯಲ್ಲಿದ್ದುದನ್ನು ಗುರುತಿಸಲಾಗಿದೆ. ಶೇಕ್ಸ್ ಪಿಯರಿನ ನಾಟಕಗಳಲ್ಲಿ ಕೂಡ ಹಳ್ಳಿಗರ ಬಾಯಿಯಲ್ಲಿ, ಕುಡುಕರ ಬಾಯಿಯಲ್ಲಿ ಲಿಮರಿಕ್ಕುಗಳು ಉರುಳಿದ್ದವು!
ಡುಂಡಿರಾಜರು ದ್ರೌಪದಿಯ ಕುರಿತಾದ ಪಂಚಪದಿಯಲ್ಲಿಯೂ ಆಕೆ ಐದೂ ಗಂಡಂದಿರಿಗೆ ಸಮಾನವಾಗಿ ಬೈಯುತ್ತಾಳೆ ಎನ್ನುತ್ತಾರೆ. ‘ಜಗಳ’ ಎಂಬ ಲಿಮರಿಕ್ಕಿನಲ್ಲಿ ಮಾತ್ರ, ಈಗ ಆನ್ ಲೈನ್ ಫುಡ್ ತರಿಸಿ ತಿಂದು ಮನೆಯಲ್ಲಿಯೇ ಇರುವ ಗಂಡ ಹೆಂಡತಿ ಇಬ್ಬರೂ ಜಗಳಾಸಕ್ತರು. ಯಾರೂ ಹೆಚ್ಚಿಲ್ಲ, ಯಾರೂ ಕಮ್ಮಿಯಿಲ್ಲ. ಇನ್ನು ಗಂಡನೇ ಹೆಂಡತಿಯನ್ನು ಶೋಷಿಸುವ ಪಂಚಪದಿಯೊಂದನ್ನು ಇಲ್ಲಿ ಸೇರಿಸಿದ್ದರೆ ಸಮಾನತೆಗೆ ಜಯವಾಗುತ್ತಿತ್ತು!
ಎರಡನೆಯ ಬಗೆಯ ಲಿಮರಿಕ್ ಗಳು ರಾಜಕೀಯವನ್ನು ವಿಮರ್ಶಾತ್ಮಕವಾಗಿ ವಿಡಂಬಿಸುವ ಪದ್ಯಗಳು. ಡುಂಡಿರಾಜರಿಗೆ ಇಂತಹ ಹನಿಗವನಗಳು, ಹಾಸ್ಯ ಪದ್ಯಗಳು ಈಗಾಗಲೇ ಕೀರ್ತಿ ತಂದಿವೆ. ಇಲ್ಲಿ ಪಂಚಪದಿಗಳಲ್ಲಿ ಕೆಲವು ಅದ್ಭುತ ಚುಟುಕಗಳು ಮೈದಾಳಿವೆ.
Reviews
There are no reviews yet.