ದಾವ-ದ-ಜಿಂಗ್
ದಾವ ತಿಳಿಯಲು ಇನ್ನೊದು ಅಗತ್ಯವಾದ ಶಬ್ದ -ದ ದಾವ್ ಎಂದರೆ ʼಪಥʼ. ʼದʼ ಎಂದರೆ ಧರ್ಮ,ಎಲ್ಲವುದಕ್ಕೂ ಅದರದರ ಧರ್ಮ ಇದೆ-ಅದೇ ʼದʼ ದಾವ್ ವ್ಯಕ್ತಗೊಳ್ಳುವುದು.ಬಾಷೆಗಳಲ್ಲಿ ಟಾವ-ಟೆ-ಚಿಂಗ್ ಅನ್ನು ದಾವ-ದ-ಜಿಂಗ್ ಎಂದು ಉಚ್ಚರಿಸಿದರೆ ಚೀನೀ ಉಚ್ಚಾರಣೆಗೆ ಸ್ವಲ್ಪ ಹತ್ತಿರವಾದಂತೆ ಎಂದು ನನಗೆ ಸೂಚಿಸಿದವರು ಮತ್ತು ಈ ಶಬ್ದಗಳಿಗೆ ʼಪಥ ಧರ್ಮ ಸೂತ್ರʼ ಎನುವ ಅನುವಾದವನ್ನು ಸೂಚಿಸಿದವರು ಪ್ರೊ.ಗಿರಿ ದೇಶಿಂಕರ್ ಅವರು.ಲಾವ್‌ತ್ಸೆಯಲ್ಲಿ ಏ ʼದʼ ಎಂಬುದು ದಾವ್ ಪ್ರಕಟಗೊಳ್ಳುವ ರೂಪ. ಲ್ಲ ವಸ್ತುಗಳಲ್ಲೂ ಅದರದರ ಧರ್ಮವಾಗಿ ವ್ಯಕ್ತವಾಗುವ ಮತ್ತು ಹೊರಹೊಮ್ಮುವಾಗಿನ ದಾವ್ ಸ್ವರೂಪ.ʼದʼ ವನ್ನು ಧರ್ಮ ಎಂದು ಅನುವಾದಿಸುತ್ತ ಹೋದರೆ ಲಾವ್‌ತ್ಸೆ ಸೂತ್ರಗಳ ಚೀನಿ ಬಾಷಾ ವಿಶಿಷ್ಟತೆಯನ್ನು ಕಡೆಗಾಣಿಸಿ ಲಾವತ್ಸೆಯನ್ನು ಇನ್ನೊಬ್ಬ ಭಾರತೀಯ ಋಷಿಯಂತೆಯೇ ಕಾಣುವಂತೆ ಮಾಡಿದಂತಾಗುತ್ತದೆ.
Reviews
There are no reviews yet.