1645ರ ಒಂದು ದಿನ ಬಾಲ ಶಿವಾಜಿ ತನ್ನ ಆಪ್ತ ಗೆಳೆಯರೊಂದಿಗೆ ‘ಹಿಂದವೇ ಸ್ವರಾಜ್ಯ’ದ ಕಲ್ಪನೆಯ ಸಾಕ್ಷಾತ್ಕಾರಕ್ಕಾಗಿ ಪ್ರತಿಜ್ಞಾಬದ್ಧನಾಗುವ ಕ್ಷಣದಿಂದ ಹಿಡಿದು `ಅವರ ಜೀವನದ ಎಲ್ಲ ಮುಖ್ಯ ಘಟ್ಟಗಳನ್ನು ವಿವರಿಸುತ್ತ ಅವರ ಅದಮ್ಯವಾದ ವ್ಯಕ್ತಿತ್ವವನ್ನು ಹಂತಹಂತವಾಗಿ ತೋರ್ಪಡಿಸುತ್ತಲೇ ಸಾಗುತ್ತದೆ ಇಲ್ಲಿಯ ಕಥನ. ಶಿವಾಜಿ ಮಾತ್ರವಲ್ಲ, ಇನ್ನಾವುದೇ ರಾಜರ ಕಥನ ಬಂದಾಗಲೂ, ಅವರ ಯುದ್ಧಾಭ್ಯಾಸ ಕದನಗಳಲ್ಲಿ ಅವರು ತೋರುತ್ತಿದ್ದ ಪರಾಕ್ರಮ, ಅವರು ಗೆದ್ದುಕೊಂಡ ಕೋಟೆಕೊತ್ತಲಗಳ ವಿವರಣೆ – ಹೀಗೆ ಓದುಗರಿಗೆ ರೋಮಾಂಚನವೀದ ಸಂಗತಿಗಳೇ ಹೆಚ್ಚು ಇರುತ್ತದೆ. ಇವೆಲ್ಲವುಗಳ ನಡುವೆ ಆ ರಾಜನ ಆಂತರ್ಯ, ಕಲಿಕೆ, ಸರಿದು, ಮಾನವೀಯ ನಿಲುವುಗಳು ಇತ್ಯಾದಿ ಸೂಕ್ಷ್ಮ ವಿಷಯಗಳು ಗೌಣವಾಗಿಬಿಡುವುದುಂಟು. ಈ ಗ್ರಂಥದಲ್ಲಿ ಹಾಗೆ ಆಗಿಲ್ಲದಿರುವುದೇ ನನಗೆ ಖುಷಿ ಕೊಟ್ಟ ವಿಷಯ.
ದೇಶವನ್ನು ಪ್ರೀತಿಸುವ ಯಾರಿಗೆ ತಾನೆ ಶಿವಾಜಿ ಇಷ್ಟವಾಗುವುದಿಲ್ಲ ಹೇಳಿ ಈ ಕೃತಿಯ ಕರ್ತೃವಾದ ಗುರುಪಾದ್ ಭಟ್ ಅವರು ಶಿವಾಜಿಯನ್ನು ಆರಾಧಿಸುತ್ತಾರೆ. ಹಾಗಾಗಿ ಶಿವಾಜಿಯ ಬಗ್ಗೆ ಬಹಳಷ್ಟು ಗ್ರಂಥಗಳನ್ನು ಓದಿ ಅಭ್ಯಾಸ ಮಾಡಿದ್ದಾರೆ. ಶಿವಾಜಿಯ ಬಹುತೇಕ ಎಲ್ಲ ಕೋಟೆಕೊತ್ತಲಗಳನ್ನು ಹಲವು ಬಾರಿ ಕಂಡು ಬಂದಿದ್ದಾರೆ. ಶಿವಾಜಿಯ ಸ್ಮಾರಕಗಳನ್ನು ನೋಡಲು ತೀರ್ಥಯಾತ್ರೆಗೆ ಹೋಗುವ ಹಾಗೆ ಭಕ್ತಿಭಾವದಿಂದ ತೆರಳುತ್ತಾರೆ. ಒಂದು ರೀತಿಯಲ್ಲಿ ಹೇಳುವುದಾದರೆ, ಭಟ್ ಅವರು ಶಿವಾಜಿಯ ಅಪ್ರತಿಮ ಭಂಟ.
ಶಿವಾಜಿಯನ್ನು ಒಂದು ಮಾದರಿ ವ್ಯಕ್ತಿತ್ವದ ಹಿನ್ನೆಲೆಯಲ್ಲಿ ಅರ್ಥೈಸಿಕೊಳ್ಳಬೇಕು ಎಂದು ಆಶಿಸುವ ಪ್ರಾಜ್ಞರಿಗೆ ಈ ಗ್ರಂಥ ಒಳ್ಳೆಯ ಓದು ವಿಶೇಷವಾಗಿ, ಶಿವಾಜಿಯ ಕುರಿತಾಗಿ ಶಿವಾಜಿಯ ಆರಾಧಕರೊಬ್ಬರು ಅತ್ಯಂತ ಪ್ರೀತಿ ಹಾಗೂ ಶ್ರದ್ಧೆಯಿಂದ ರಚಿಸಿರುವ ಈ ಹೊತ್ತಿಗೆಯನ್ನು ಎಲ್ಲರೂ ಆದರದಿಂದ ಸ್ವೀಕರಿಸುವಂತಾಗಲಿ ಎಂದೇ ನನ್ನ ಹಾರೈಕೆ
-6%
Availability: In StockPrintbook
ಛತ್ರಪತಿ – Revised Edition
Author: Guruprasad Bhat
Original price was: ₹320.00.₹300.00Current price is: ₹300.00.
153 in stock
About this Printbook
Information
Additional information
Category | |
---|---|
Author | |
Publisher | |
Book Format | Printbook |
Language | Kannada |
Year Published | 2023 |
Reviews
Only logged in customers who have purchased this product may leave a review.
Reviews
There are no reviews yet.