ಭಾವಕ್ಕೆ ತಕ್ಕಂತೆ
ಅನಿತಾ ನಾಡಿಗ್ ಅವರ ಪುಸ್ತಕ
‘ಭಾವಕ್ಕೆ ತಕ್ಕಂತೆ’ ವಿವಿಧ ರಸಗಳನ್ನೊಳಗೊಂಡ ಒಂದು ಹನಿಗವನಗಳ ಸಂಕಲನ. ಇದು ಅನಿತಾ ನಾಡಿಗ್ ಅವರ ಎರಡನೇ ಪುಸ್ತಕ. ಕೆಲವೊಮ್ಮೆ ನಗಿಸಿ, ಕೆಲವೊಮ್ಮೆ ಚಿಂತನೆಗೆ ಹಚ್ಚಿ, ಇನ್ನೂ ಕೆಲವೊಮ್ಮೆ ಓದುಗನನ್ನು ಆತ್ಮಾವಲೋಕನಕ್ಕೆ ಆಹ್ವಾನಿಸುವ ಸುಮಾರು 80 ಹನಿಗವಿತೆಗಳ ಸಂಕಲನ. ಸುಲಭವಾಗಿ ಓದಿಸಿಕೊಂಡು ಹೋಗುವ ಈ ಪುಸ್ತಕ, ಓದಿ ಮುಗಿಸಿದ ಮೇಲೂ ಕೆಲವು ಚುಟುಕಗಳು ಓದುಗನ ಮನಸ್ಸಿನಲ್ಲಿ ಆಗಾಗ ಮೂಡುತ್ತದೆ.
ಕವಯತ್ರಿ ‘ಅನಿತಾ ನಾಡಿಗ್’ ಅವರ ಹನಿಗವನ ಸಂಕಲನ ‘ಭಾವಕ್ಕೆ ತಕ್ಕಂತೆ’ ಶೀರ್ಷಿಕೆಯು, ನನ್ನಲ್ಲಿ ಅನೇಕ ರೀತಿಯ ಚಿಂತನೆಗೆ ಹಚ್ಚಿದೆ. ಒಂದು ಕವಿತೆ ಅಥವಾ ಅದರ ಶೀರ್ಷಿಕೆ ಅಥವಾ ಅಲ್ಲಿನ ಒಂದು ಸಾಲು ಸಹೃದಯನನ್ನು ಅರ್ಥದ ಅನ್ವೇಷಣೆಯಲ್ಲಿ ತೊಡಗಿಸುವುದೇ ಶ್ರೇಷ್ಠತೆಯ ಸಂಕೇತವೆಂದು ನಾನು ನಂಬಿದ್ದೇನೆ. ‘ಸತ್ತವರ ನೆರಳು’ ಒಂದು ಉತ್ತಮ ರೂಪಕವಾಗಿ ಮೂಡಿ ಬಂದಿದೆ. ದೇಹ ಶಾಶ್ವತವಲ್ಲ, ನೆನಪುಗಳು ಮಾತ್ರ ಶಾಶ್ವತವಾಗಿ ಉಳಿಯುತ್ತವೆ. ಇಲ್ಲಿ ನೆನಪು ಎನ್ನುವುದನ್ನು ಕವಿತೆಯೆಂದೂ ಪರಿಭಾವಿಸಬಹುದು.
– ಜರಗನಹಳ್ಳಿ ಶಿವಶಂಕರ
Reviews
There are no reviews yet.