ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಯುಗಾದಿ, ದೀಪಾವಳಿ, ಸಂಕ್ರಾಂತಿ ಮೊದಲಾದ ಅನೇಕ ಹಬ್ಬಗಳನ್ನು ಆಚರಿಸುವ ಸಂಪ್ರದಾಯವಿದೆ. ಪ್ರತಿಯೊಂದು ಹಬ್ಬದ ಆಚರಣೆಗೂ ತನ್ನದೇ ಆದ ವೈಶಿಷ್ಟ್ಯ ಹಾಗೂ ಹಿನ್ನೆಲೆ ಇದೆ. ಹಬ್ಬಗಳ ಸಂದರ್ಭದಲ್ಲಿ ಮನೆಯವರು, ಬಂಧು ಬಳಗದವರೆಲ್ಲರೂ ಒಟ್ಟಾಗಿ ಸೇರಿ ಉಲ್ಲಾಸದಿಂದ, ಸುಖ ಸಂತೋಷದಿಂದ ಜೀವನವನ್ನು ನಡೆಸಬೇಕೆಂಬುದು ಹಬ್ಬಗಳ ಆಚರಣೆಯ ಹಿನ್ನೆಲೆಯಲ್ಲಿ ಒಂದು. ಹಬ್ಬ ಹರಿದಿನಗಳನ್ನು ಸಂತೋಷವಾಗಿ ಆಚರಿಸುವುದು. ಕೆಲವನ್ನಂತೂ ವಿಜೃಂಭಣೆಯಿಂದ ಆಚರಿಸುವುದು ಹಿಂದೂ ಸಮಾಜಕ್ಕೆ ಬಂದಿರುವ ಆನಂದದ ಸಂಗತಿ. ಆದರೆ ಬಹು ಬಾರಿ ಆ ಹಬ್ಬಗಳ “ಏಕೆ ಮತ್ತು ಹೇಗೆ”ಯನ್ನು ನಮ್ಮಲ್ಲಿ ಬಹು ಜನರು ಅರಿಯರು! ಹಬ್ಬಗಳೆಂದರೆ ಬರಿ ಕೇವಲ ಉಂಡು, ಹೊಸಬಟ್ಟೆ ತೊಟ್ಟು ನಲಿದಾಡುವುದಲ್ಲ ಆ ವ್ರತ ನಿಯಮ ನಿಷ್ಠೆ ಎಲ್ಲಾ ದಿನಗಳಲ್ಲಿ ಆಚರಿಸಲು ಅಸಾದ್ಯ ಆದಾಗ ಈ ನಿಯತ ದಿನಗಳಲ್ಲಾದರೂ ಜಪ, ತಪ, ಪೂಜೆ ಮಾಡಬೇಕು. ದೈವ ಸಾಕ್ಷಾತ್ಕಾರಕ್ಕೆ ಹಬ್ಬಗಳು ಜಯಂತಿಗಳು ಕಾರಣವಾಗಬೇಕು ಹಾಗೂ ಇಹ, ಪರ ಬದುಕಿಗೆ ಮತ್ತು ಸದ್ಗತಿಗೆ ಕಾರಣ ಆಗಬೇಕು. ಆಗ ಹಬ್ಬಗಳ ಆಚರಣೆಗೆ ಗೌರವ ಸಿಗುವುದು. ಪ್ರಮುಖ ಹಿಂದು ಹಬ್ಬಗಳ ಹಾಗೂ ಜಯಂತಿಗಳ ಹಿನ್ನೆಲೆ, ಆಚರಣಾ ಮಾಹಿತಿಯನ್ನು ಈ ಲೇಖನವು ಒಳಗೊಂಡಿದೆ.
-20%
Ebook
ಬಾಂಧವ್ಯ ಬೆಸೆಯುವ ಹಬ್ಬಗಳು
Author: K.R. Prakash Babu
Original price was: $2.28.$1.83Current price is: $1.83.
ಸನಾತನ ಧರ್ಮ, ಪರಂಪರೆಗಳು ಹಬ್ಬಗಳ ಆಚರಣೆಗೆ ತುಂಬಾ ವಿಶಿಷ್ಟವಾದ ಸ್ಥಾನವನ್ನು ನೀಡಿವೆ. ಭಾರತದಲ್ಲಿರುವಷ್ಟು ಹಬ್ಬ, ಹರಿದಿನಗಳು ಬೇರೆಲ್ಲೂ ಇಲ್ಲ. ವರ್ಷದ ಪ್ರತಿ ದಿನವೂ ಹಲವಾರು ರೀತಿಗಳಿಂದ ಪ್ರಾಮುಖ್ಯವನ್ನು ಪಡೆದಿರುವುದು ಇಲ್ಲಿನ ವೈಶಿಷ್ಟ್ಯ. ಜನಜೀವನ ಹಾಗೂ ಧಾರ್ಮಿಕ ಸಂಸ್ಕೃತಿಯ ಅತಿ ಪ್ರಾಚೀನತೆ ಇದಕ್ಕೆ ಕಾರಣ. ಪ್ರಮುಖ ಹಿಂದು ಹಬ್ಬಗಳ ಹಾಗೂ ಜಯಂತಿಗಳ ಹಿನ್ನೆಲೆ, ಆಚರಣಾ ಮಾಹಿತಿಯನ್ನು ಈ ಲೇಖನವು ಒಳಗೊಂಡಿದೆ.
About this Ebook
Information
Additional information
Author | |
---|---|
Publisher | |
Book Format | Ebook |
Pages | 280 |
ISBN | 978-81-935820-6-0 |
Year Published | 2018 |
Language | Kannada |
Category |
Reviews
Only logged in customers who have purchased this product may leave a review.
Reviews
There are no reviews yet.