Audiobook

ಬದುಕು ಬದಲಿಸಬಹುದು

Author: Nemichandra

Original price was: $2.34.Current price is: $1.75.

ಈ ಸಂಕಲನದ ಒಂದೊಂದೇ ಲೇಖನ ಓದುತ್ತ ಹೋದಂತೆ ಬದುಕಿನ ಹಲವು ಮುಖಗಳ ಪರಿಚಯ ಆಗುತ್ತದೆ. ನೋವು ನಲಿವಿನ, ನಿಟ್ಟುಸಿರಿನ ತುಣುಕುಗಳು ಸೇರಿಯೇ ಈ ಬದುಕು ನಡೆಯುತ್ತದೆ ಎಂಬುದನ್ನು, ಸೋಲನ್ನು, ನೋವನ್ನು, ನಿರಾಶೆಯನ್ನು, ಕೆಲವೊಮ್ಮೆ ತನ್ನ ತಪ್ಪಿಲ್ಲದಿದ್ದರೂ ಒದಗಿ ಬರುವ ಅಪಮಾನವನ್ನು ಹೇಗೆ ಎದುರಿಸಬೇಕೆಂಬುದನ್ನು, ಮುಗ್ಗರಿಸಿ ಬಿದ್ದರೂ ಎದ್ದು ಕೊಡವಿ ನಡೆಯುವ ತಾಕತ್ತನ್ನು, ಸತ್ತು ಮುಗಿಸದೆ ಇದ್ದು ಬದುಕುವ ದಿಟ್ಟತನವನ್ನೂ, ಮತ್ತೆ ಮತ್ತೆ ಪ್ರಾರಂಭಿಸಬಲ್ಲ ಛಲವನ್ನು ಓದುಗರ ತಲೆಗೂ ಹೊಗಿಸುವ ಲೇಖನಗಳಿವು. ಈ ಕೃತಿಯ ಲೇಖಕಿ ನೇಮಿಚಂದ್ರ ವೃತ್ತಿಯಿಂದ ಎಂಜಿನಿಯರ್. 

ಡಾ|| ಹಾ. ಮಾ. ನಾ. ಪ್ರಶಸ್ತಿ ಪುರಸ್ಕೃತ ಕೃತಿ

ಪ್ರವೃತ್ತಿಯಿಂದ ಲೇಖಕಿ. ಬರಹದಲ್ಲಿ ವಿಶಿಷ್ಟ ಶೈಲಿಯನ್ನು ರೂಢಿಸಿಕೊಂಡವರು. ಸಮಾಜದ ಬಗ್ಗೆ, ಅದರಲ್ಲೂ ಮಹಿಳೆಯರ ಬಗ್ಗೆ ವಿಶೇಷ ಕಳಕಳಿ. ಪ್ರವಾಸಾಸಕ್ತ ಸಾಹಸಿ, ಕತೆಗಾರ್ತಿಯಾಗಿ, ಅಂಕಣಕಾರ್ತಿಯಾಗಿ ಪರಿಚಿತರು. ಇವರ ‘ನೋವಿಗದ್ದಿದ ಕುಂಚ, ‘ಪೆರುವಿನ ಪವಿತ್ರ ಕಣಿವೆಯಲ್ಲಿ, ‘ಯಾದ್ ವಶೇಮ್, ‘ದುಡಿವ ಹಾದಿಯಲಿ ಜೊತೆಯಾಗಿ, ‘ಕಾಲುಹಾದಿಯ ಕೋಲ್ಮಿಂಚುಗಳು – ಮಹಿಳಾ ವಿಜ್ಞಾನಿಗಳು, ‘ಹೋರಾಟದ ಹಾದಿಯಲ್ಲಿ ಧೀಮಂತ ಮಹಿಳೆಯರು, ‘ಬದುಕು ಬದಲಿಸಿದ ಭಾವೇಶ್ ಭಾಟಿಯಾ, ‘ಸಾವೇ ಬರುವುದಿದ್ದರೆ ನಾಳೆ ಬಾ!’ (ಬದುಕು ಬದಲಿಸ ಬಹುದು, ಭಾಗ-೨), ‘ಸೋಲೆಂಬುದು ಅಲ್ಪವಿರಾಮ’(ಬದುಕು ಬದಲಿಸಬಹುದು, ಭಾಗ-೩) ಮತ್ತು ‘ಸಂತಸ, ನನ್ನೆದೆಯ ಹಾಡು ಹಕ್ಕಿ’(ಬದುಕು ಬದಲಿಸಬಹುದು, ಭಾಗ-೪) ಮುಂತಾದ ಹಲವು ಕೃತಿಗಳು ನವಕರ್ನಾಟಕದಿಂದ ಪ್ರಕಟವಾಗಿವೆ.

 

ಅಧ್ಯಾಯಗಳು:

1.ಸಮಯವಿಲ್ಲವೆ ಹೇಳಿ 16.ಹಚ್ಚೋಣ ಹಣತೆಗಳ 31.ಪರಿಹಾರವಿದೆ ನಮ್ಮ ಕೈಯಲ್ಲಿ
2.ಕನಸು ಕಾಣುವ ಬನ್ನಿ 17.ಇರುವುದೆಲ್ಲವ ನೆನೆದು 32.ಜಗ್ಗದಿರಿ ಹಗ್ಗವನ್ನು
3.ಸ್ನೇಹಕ್ಕೆ ಯಾವ ಸರಹದ್ದು 18.ಜಗದ ಸಂತೆಯಲಿ ಮನೆಯ ಮಾಡಿ 33.ಬೇರಿಳಿಸಿ ಹಾರುವ ಪರಿ
4.ಸೋಲಿಲ್ಲದ ಮನೆಯ ಸಾಸಿವೆ 19.ಆದದ್ದೆಲ್ಲ ಒಳಿತೇ ಆಯಿತು 34.ಭಾರತೀಯರೆಂಬ ಅಭಿಮಾನವಿರಲಿ
5.ಜಗತ್ತು ಬದಲಾಗಬಹುದು 20.ನೆನಪಿರಲಿ ಬಡವರಿದ್ದಾರೆ 35.ದುಡಿಯಬಲ್ಲೆವು ನಾವು
6.ಆಯ್ಕೆಯಿದೆ ನಮ್ಮ ಕೈಯಲ್ಲಿ 21.ನಕ್ಕು ಗುಣವಾದವರು 36.ನೀರು ಕೊಡದ ನಾಡಿನಲ್ಲಿ
7.ಬರೆದಿಡಿ… ಬರೆದಿಡಿ 22.ಬದುಕು ಬದಲಾದಾಗ 37.ಅಂಧ ಅನುಕರಣೆಯ ಬಿಟ್ಟು
8.ಆತ ಕೊಟ್ಟ ವಸ್ತು ಒಡವೆ, ನನಗೆ ಅವಗೆ ಗೊತ್ತು 23.ಕತ್ತಲ ಹಾದಿಯಲ್ಲಿ ದೊಂದಿ ಹಿಡಿದು 38.ನಮ್ಮ ನಾಳೆಗಳಿಗಾಗಿ
9.ಬದುಕು ಮುಗಿಯುವುದಿಲ್ಲ ಅಲ್ಲಿಗೇ 24.ಹಂಚಿ ಹಗುರಾದವರು 39.ಚಿಗುರಿಸಿ ಕನಸುಗಳನ್ನು
10.ಮುಗಿಲು ಕೂಡ ಮಿತಿಯಲ್ಲ 25.ಕಣ್ಣು ತೆರೆದಾಗಲೇ ಬೆಳಗು 40.ನಾಳೆ ಮಾಡೋಣ
11.ಅವರೊಂದು ಉದಾಹರಣೆ 26.ಏನಾದರೂ ಮಾಡಿ, ದೂರಬೇಡಿ 41.ಬದುಕು ಬರಿದಾಗದಿರಲಿ
12.ಭಯದ ಕರಿನೆರಳನ್ನು ದಾಟಿ 27.ಕೊಟ್ಟು ಗಳಿಸಿದವರು 42.ಭ್ರಮಾಲೋಕದಾಚೆಗೆ
13.ರೂಪ ರೂಪಗಳನು ದಾಟಿ 28.ಮರಳಿ ಬದುಕಿಗೆ ಈ ಪಯಣ 43.ಜಗತ್ತು ಹಸಿರಾಗಬಹುದು
14.ಬದುಕು… ನಿನ್ನಲ್ಲೆಂಥ ಮುನಿಸು 29.ಕಾಸಿಲ್ಲದೆ ಕಲಿತದ್ದು 44.ಬನ್ನಿ ಸಾಧನೆಯ ರಂಗಕ್ಕೆ
15.ಬಿಡದೆ ಮುಂದೆ ನಡೆಯುವ ನಾವು 30.ಕ್ಷಮಿಸಬಹುದೆ…? 45.ಮತ್ತೆ ಭೇಟಿಯಾಗೋಣ

Additional information

Category

Author

Publisher

Book Format

Audiobook

Language

Kannada

Narrator

Nemichandra

Duration

418min

Reviews

There are no reviews yet.

Only logged in customers who have purchased this product may leave a review.