ಕನ್ನಡ ಸಾಹಿತ್ಯ ಪ್ರಕಾರಗಳಲ್ಲಿ ಅಷ್ಟು ಪ್ರಚಲಿತದಲ್ಲಿ ಇಲ್ಲದಿದ್ದರೂ ಕೂಡ, ಎಲ್ಲ ಕವಿಗಳೂ ತಮ್ಮ ಜೀವಮಾನದಲ್ಲಿ ಒಂದಲ್ಲ ಒಂದು ಬಾರಿ ಪ್ರಯತ್ನಪಟ್ಟಿರಬಹುದಾದ ಹಾಗೂ ತಮ್ಮ ಪ್ರಯತ್ನಕ್ಕೆ ಸಂತಸ ಪಟ್ಟಿರಬಹುದಾದ ಕಾವ್ಯ ಪ್ರಕಾರವೇ- ಅಣಕವಾಡು. ಆದರೂ ಈ ಪ್ರಕಾರದಲ್ಲಿ ಒಂದು ಇಡಿಯ ಹೊತ್ತಿಗೆಯನ್ನು ಸೃಜಿಸಿರುವವರು ಅಂದರೆ, ನನಗೆ ತಿಳಿದಮಟ್ಟಿಗೆ ನಮ್ಮ ರಾಮನಾಥರೊಬ್ಬರೇ ಇರಬೇಕು. ಏಕೆಂದರೆ, ಅವರು ಬರೆದ ಅಣಕವಾಡುಗಳ ಸಂಖ್ಯೆಯೂ ಗಣನೀಯ. ಆ ಹಾಡುಗಳಲ್ಲಿ ಅವರು ಕಂಡುಕೊಂಡಿರುವ ಚಿಂತನೆಗಳೂ ಕೂಡ ಗುಣನೀಯ!
ಏನಿದು ಅಣಕವಾಡು? ಮೂಲ ಹಾಡೊಂದರ ನುಡಿಗಟ್ಟು, ರಾಗ ಹಾಗೂ ಮಟ್ಟನ್ನು ಹಾಳುಗೆಡವದೆ, ಆ ಹಾಡಿನ ಧ್ವನಿಗೆ ಧಕ್ಕೆಯುಂಟುಮಾಡದೆ, ಅಲ್ಲಲ್ಲಿ ಪದಗಳನ್ನು ಬದಲಿಸುತ್ತ ಇಡಿಯ ಹಾಡನ್ನು ರೂಪಾಂತರಗೊಳಿಸಿದಾಗ, ಅಲ್ಲಿ ನಮಗೆ ತೋರ್ಪಡುವ ಹೊಸತೊಂದು ಹಾಡು ಹಾಗೂ ಹೊಸತೊಂದು ಭಾವವೇ ಅಣಕವಾಡು. ಅಣಕ ಅಂದರೆ ಅತಿಶಯ, ಅಪಹಾಸ್ಯ, ಹುಡುಗಾಟಿಕೆ, ಮೂದಲಿಕೆ, ವಿನೋದ ಇತ್ಯಾದಿ ಅರ್ಥಗಳೆಲ್ಲ ಇರುವುದರಿಂದ ಇವೆಲ್ಲವನ್ನೂ ಒಂದಲ್ಲ ಒಂದು ರೀತಿಯಲ್ಲಿ ಅಣಕವಾಡಿನಲ್ಲಿ ಕವಿ ಬಳಸಿಕೊಳ್ಳುತ್ತಾನೆ.
-40%
Ebook
ಅಣಕವಾಡಿನ ಅಂಗಳದಲ್ಲಿ…
Author: N. Ramanath
Original price was: ₹100.00.₹60.00Current price is: ₹60.00.
ಏನಿದು ಅಣಕವಾಡು? ಮೂಲ ಹಾಡೊಂದರ ನುಡಿಗಟ್ಟು, ರಾಗ ಹಾಗೂ ಮಟ್ಟನ್ನು ಹಾಳುಗೆಡವದೆ, ಆ ಹಾಡಿನ ಧ್ವನಿಗೆ ಧಕ್ಕೆಯುಂಟುಮಾಡದೆ, ಅಲ್ಲಲ್ಲಿ ಪದಗಳನ್ನು ಬದಲಿಸುತ್ತ ಇಡಿಯ ಹಾಡನ್ನು ರೂಪಾಂತರಗೊಳಿಸಿದಾಗ, ಅಲ್ಲಿ ನಮಗೆ ತೋರ್ಪಡುವ ಹೊಸತೊಂದು ಹಾಡು ಹಾಗೂ ಹೊಸತೊಂದು ಭಾವವೇ ಅಣಕವಾಡು. ಅಣಕ ಅಂದರೆ ಅತಿಶಯ, ಅಪಹಾಸ್ಯ, ಹುಡುಗಾಟಿಕೆ, ಮೂದಲಿಕೆ, ವಿನೋದ ಇತ್ಯಾದಿ ಅರ್ಥಗಳೆಲ್ಲ ಇರುವುದರಿಂದ ಇವೆಲ್ಲವನ್ನೂ ಒಂದಲ್ಲ ಒಂದು ರೀತಿಯಲ್ಲಿ ಅಣಕವಾಡಿನಲ್ಲಿ ಕವಿ ಬಳಸಿಕೊಳ್ಳುತ್ತಾನೆ.
About this Ebook
Information
Additional information
Author | |
---|---|
Publisher | |
Book Format | Ebook |
Language | Kannada |
Pages | 120+4 |
Year Published | 2018 |
Category |