ಸಹನೆ

ಸಹನೆ

ಸಹನೆಯು ಬಾಳಿಗೆ ಹಸನಾದ ಹಾದಿ
ಇದುವೇ ಜೀವನಕೆ ಆಗುವುದು ಬುನಾದಿ
ದುಃಖಿಸಿದವನೊಮ್ಮೆ ನಗುವುದುಂಟು
ನಕ್ಕವನೊಮ್ಮೆ ದುಃಖಿಸುವುದುಂಟು
ಜೀವನ ನೌಕೆಯಲಿ ಎಲ್ಲವೂ ಜಹಜ
ಆತುರವಿರದೆ ಅರಿಯಬೇಕು ಮನುಜ
ಕಷ್ಟವನರಿತು ಯೋಚಿಸಬೇಕು
ದುರಂತಗಳ ತಾಳ್ಮೆಯಲಿ ಎದುರಿಸಬೇಕು.
ದುಡುಕಲು ಅರ್ಥವು ಅನರ್ಥವಾಗುವುದು
ಕೋಪದ ಕೈಯಿಗೆ ಬುದ್ಧಿಯು ಸಲ್ಲ
ಮನುಜನದು ಕ್ರೂರ ಪ್ರಾಣಿಯಾಗಬಲ್ಲ
ತಾಳ್ಮೆಯ ನಂಟನು ಬಯಸಿರಿ ಎಲ್ಲ
ಪ್ರೀತಿ, ಕರುಣೆ ಭರಿಸುವುದು
ಸೌಹಾರ್ದತೆಯ ಬೆಲ್ಲ.

Leave a Reply