ದೇವರು ಸಿಕ್ಕ!

ದೇವರು ಸಿಕ್ಕ!

ಸಿಕ್ಕನಿಂದು ದೈವ ಎನಗೆ
ಎನ್ನ ಸಕಲ ಶ್ರೇಷ್ಠ ಕಾಯಕದೊಳಗೆ
ವಜ್ರ ದೇಹದೊಳಗೆ
ಬರುವನು ಒಮ್ಮೊಮ್ಮೆ
ಕಣ್ಣ ಕಂಬನಿಯಲ್ಲಿ ತಿಳಿಗೊಡಿಸದೆ
ಸದಾ ನಗುವನು ಹೃದಯದೊಳಗೆ
ಕುದಿಕುದಿವ ಕಷ್ಟದಲ್ಲಿ ಬೇಯಿಸುವನು
ನೋವ ಜಾಲದಲ್ಲಿ ಸಿಕ್ಕಿಸಿ ಪರೀಕ್ಷಿಸುವನು
ಸಕಲ ಆಮಿಷಗಳಿಗೆ ಗೋಡೆಕಟ್ಟಿ
ಆಸೆಗಳ ಗೋಪುರಗಳ ಹೊಡೆಯುವನು
ಬೆಂದು ಬೆಂದು ಬೋರಲಾಗಲು
ಮೌನವಾಗಿಸುವವನು.
ಮೌನದಲ್ಲೆ ಎಲ್ಲವನ್ನು ತಿಳಿಸುವನು
ಮೌನವನ್ನು ಧ್ಯಾನಕ್ಕೆ ಹಚ್ಚಿ
ಧ್ಯಾನದಲ್ಲೆ ಧ್ಯಾನಿಯಾಗಿಸಿ
ತ್ಯಾಗಮಯಿ ಮಾಡುವನು
ಆನಂದದ ಅತೀತ ಅನುಭವ
ಮೈಗೂಡಿಸುವ ದೈವನು
ಸಿಕ್ಕನಿಂದು ಎನಗೆ
ಹೊರ ಜಗಕೆ ಕಾಣನಿವನು
ಅಂತರಂಗದ ಕಣ್ಣ ತೆಗೆಯೆ ಒಮ್ಮೆ
ಅಲ್ಲೆ ಅಡಗಿ ಕುಳಿತಿಹನು
ಸರ್ವರಲ್ಲೂ ಕಾಣಸಿಗುವನು.

Leave a Reply