ಇಲ್ದಿದ್ದರೇನಂತೆ ಪಾದ್ರಿ ಪುರಾಣ
ಸಂಚಿ ಫೌಂಡೇಷನ್ ಹಾಗೂ ನೀನಾಸಮ್ ಜೊತೆಯಾಗಿ ನಡೆಸುತ್ತಿರುವ “ನೀನಾಸಮ್ ರಂಗಸಂಗೀತಗಳ ದಾಖಲೀಕರಣ” ಯೋಜನೆಯ ಇನ್ನೊಂದು ಪ್ರಸ್ತುತಿ ಇಲ್ಲಿದೆ.
ಮೂರು ಕಾಸಿನ ಸಂಗೀತ ನಾಟಕ – ೧೯೮೬ ನೀನಾಸಮ್ ತಿರುಗಾಟ | ನಾಟಕಕಾರ: ಬರ್ಟೋಲ್ ಬ್ರೆಕ್ಟ್ | ಅನುವಾದ, ಗೀತಕಾರ: ಕೆ.ವಿ. ಸುಬ್ಬಣ್ಣ | ನಾಟಕ ನಿರ್ದೇಶನ: ಅಕ್ಷರ ಕೆ.ವಿ | ಸಂಗೀತ ಸಂಯೋಜನೆ:ಶ್ರೀನಿವಾಸ ಭಟ್ (ಚೀನೀ)
ಇಲ್ದಿದ್ದರೇನಂತೆ ಪಾದ್ರಿ ಪುರಾಣ ಕಾಲ್ಗೆಜ್ಜೆ ಝಣಝಣ ಮಂಗಳ ತೋರಣ
ಯಾರಾದರೇನಂತೆ ನೆಂಟರು ಕುಲಗೋತ್ರ ಯಾರು ಕೊಟ್ಟರು ಸರಿಯೇ ಜರತಾರಿ ವಸ್ತ್ರ
ಇಲ್ದಿದ್ದರೇನಂತೆ ಪಾದ್ರಿ ಪುರಾಣ
ತಿಂದಾಯ್ತು ತಟ್ಟೆಯ ಹೊರಗೆ ಎಸೆಯೋಣಂತೆ ಸದ್ಯ ಇನ್ಯಾತಕ್ಕೆ ಅನ್ನ ಸಾರಿನ ಚಿಂತೆ
ನಗರನಗರಗಳಲ್ಲಿ ನಗರರಾಶಿಗಳಲ್ಲಿ ಪ್ರೇಮಕ್ಕೆ ಎಂದೂ ಚ್ಯುತಿಯಿಲ್ಲ
ಇದ್ದರೂ, ಕಿಂಚಿತ್ ಇರಬಹುದು, ಗೊತ್ತಿಲ್ಲ!