ವ್ಯಾಸ ಪೀಠ
ಗ್ರಂಥಗಳನ್ನು ಇಟ್ಟುಕೊಂಡು ಪಾರಾಯಣ ಮಾಡುವ ಈ ಸಾಧನಕ್ಕೆ ವ್ಯಾಸ ಪೀಠ ಎಂದು ಹೆಸರು. ಹಿಂದೆ ಭಾಗವತ, ರಾಮಾಯಣ, ಮಹಾಭಾರತ ಮುಂತಾದ ಧರ್ಮಗ್ರಂಥಗಳನ್ನು ಈ ಪೀಠದ ಮೇಲೆ ಇಟ್ಟುಕೊಂಡು ಅಧ್ಯಯನ ನಡೆಸುತ್ತಿದ್ದರು. ಓದಿನ ಅನುಕೂಲಕ್ಕೆ ತಕ್ಕಂತೆ ಎರಡೂ ಫಲಕಗಳನ್ನು ಹೊಂದಿಸಿಕೊಳ್ಳಬಹುದಾದ ಈ ಪರಿಕರ, ಕೈಯಲ್ಲಿ ಪುಸ್ತಕ ಹಿಡಿದು ಓದುವ ಶ್ರಮವನ್ನು ತಪ್ಪಿಸುತ್ತದೆ. ಅಧ್ಯಯನದ ನಂತರ ಸುಲಭವಾಗಿ ಮಡಚಿ ಎಲ್ಲಿಗೆ ಬೇಕಾದರೂ ಒಯ್ಯುವಂತಹ ರಚನೆಯಿರುವ ಈ ವ್ಯಾಸ ಪೀಠ ಇಡಿಯಾಗಿದ್ದು; ಒಂದೇ ಹಲಗೆಯನ್ನೇ ಮಧ್ಯದಲ್ಲಿ ಸೀಳಿ ತಯಾರಿಸಲಾಗಿದೆ. ತೇಗದ ಮರದಿಂದ ನಿರ್ಮಿಸಿದ ಈ ಅಪರೂಪದ ವಸ್ತು ಇಂದಿಗೂ ಸುಸ್ಥಿತಿಯಲ್ಲಿದ್ದು ದೊಡ್ಡ ದೊಡ್ಡ ಗ್ರಂಥಗಳನ್ನು ಓದುವವರಿಗೆ ನೆರವಾಗುತ್ತಿದೆ. ನೆಡೆದ ದಾರಿಗೂ ನಡೆವ ದಾರಿಗೂ ಬಹಳ ಅಂತರವಿರುವ ಈ ಹೊತ್ತಿನಲ್ಲಿ ಇವೆಲ್ಲಾ ಕೇವಲ ನೆನಪು!!!
ಹೊಸ್ಮನೆ ಮುತ್ತು