ವಿಧಿ..
ಅವಳ “ಮೌನ”ದ ನಿಲುವಿನಲ್ಲಿ ನೂರು ಮಾತುಗಳ ಬಲಿಯಾಗಿದೆ
ಅವಳ “ತ್ಯಾಗ”ದ ಬೆನ್ನಲ್ಲಿ ಸಾವಿರ ಸಾವಿರ ಕನಸುಗಳ ಅಂತ್ಯಕ್ರಿಯೆ ಆಗಿದೆ
ಅವಳ “ಬೇಡ” ಎನ್ನುವ ನಿರ್ಧಾರದಲ್ಲಿ ಸಾವಿರ ಬಯಕೆಗಳ ಬಲಿಯಾಗಿದೆ
ಅವಳ ಗಹ ಗಹಿಸುವ “ನಗು”ವಿನ ಮೊಗದಲ್ಲಿ ಕಡಲ ಆಳದ ದುಃಖ ಹೂತು ಹೋಗಿದೆ
“ಕಾಮ”ಕ್ಕೆ ಹಾಸಿದ ಸೆರಗಿನಲ್ಲಿ ಒಲವಿನ ಅನುರಾಗ ಸುಟ್ಟು ಬೂದಿ ಆಗಿದೆ
ಅವಳ “ನಿರೀಕ್ಷೆಗಳ” ಕಣ್ಣ ನೋಟದಲ್ಲಿ ಕಾದ ಜ್ವಾಲಾಮುಖಿ ಅಡಗಿದೆ
ಅವಳ “ನಿಟ್ಟುಸಿರು” ಎದೆಯಲ್ಲಿ ತುಂಬಿದ ಅನಂತ ಪ್ರೇಮವ ಸಮಾಧಿ ಮಾಡಿದೆ
ನೋವುಂಡ “ಬದುಕು” ಸದಾ ನಿರೀಕ್ಷೆಗಳ ಆಲದ ಮರದಡಿ ಅನಂತದೆಡೆ ನೋಟ ಬೀರಿದೆ
ಉಮಾ ಭಾತಖಂಡೆ.