ತೊರೆ ಮತ್ತು ನಾನು
ನಾ ಹರಿವ ಝರಿ
ನಾ ಕುಣಿಯುತ ಸಾಗುವ ತೊರೆ
ನಾ ನಿನಾದದಿ ಧುಮುಕುವ ಜಲಪಾತ
ಆ ಬಾಲ್ಯದಲ್ಲಿ ಆ ಯೌವ್ವನದಲ್ಲಿ.
ನಾ ಪಡೆದ ಹೊಸದೊಂದು ತಿರುವು
ನಾ ಕಂಡಿದ್ದು ಅಡ್ಡಡ್ಡ ಬಂಡೆ
ನಾ ಚಡಪಡಿಸಿದೆ ಸಿಗದೆ ಇಳಿಜಾರು.
ನಾ ನಿಂತೆ ನಾ ನಿಂತೆ ಗಂಟಿನ ನಂಟಿನಲಿ
ನಾನೇ ಬಿಗಿದಪ್ಪಿದೆನೆ ಈ ಹಾದಿ ?
ತಿರುವಿನ ನೀರೆಲ್ಲ ರಾಡಿ ರಾಡಿ.
ಈ ತೊರೆ ಈ ಝರಿ ಈ ಜಲಪಾತ
ನಿಲ್ಲದಲ್ಲ ಸಿಕ್ಕೊಡನೆ ಬಂಡೆ ?
ನಾ ಅರಿತೆ ನಾ ಅರಿತೆ ನನಗೀಗ ಬೇಕು ಹೊಸ ಹಾದಿ
ನಾನಾಗಲಿಲ್ಲ ನಿಂತ ಕೆರೆಯ ನೀರು
ನಾ ಬಯಸಿದ್ದು ಝುಳು ಝೂಳು ನಿನಾದದಿ ಹರಿವ ನೀರು
ನಾ ಕಂಡೆ ಸರಿದು ಸಾಗುವ ಮಾರ್ಗ
ನಾನೀಗ ಗಂಭೀರ ಜಲಪಾತ ಧುಮುಕಿದಷ್ಟು ಅಬ್ಬರ
ಧೈರ್ಯ, ಬಲ, ಸ್ಫೂರ್ತಿಯ ಆಗರ.