ಸಿರಿಧಾನ್ಯದ ಗೊಂಬೆ
ಸಿರಿಧಾನ್ಯಗಳು ‘ಅತ್ಯು ತ್ಕ್ರಷ್ಟ ಆಹಾರ’ ಇವು ಸಣ್ಣ ಬೀಜರೂಪದ ಧಾನ್ಯಗಳಾಗಿದ್ದು ಭಾರತದಲ್ಲಿ ಹಿಂದಿನ ಕಾಲದಿಂದಲೂ ಬೆಳೆಯಲಾಗುತ್ತಿದೆ.ಬೇರೆ ಧಾನ್ಯಗಳಿಗೆ ಹೋಲಿಸಿದರೆ ಸಿರಿಧಾನ್ಯ ಬೆಳೆಸಲು ನೀರಿನ ಅವಶ್ಯಕತೆ ತುಂಬಾ ಕಡಿಮೆ. ಕೀಟನಾಶಕಗಳು ರಾಸಾಯನಿಕ ಗೊಬ್ಬರಗಳ ಅಗತ್ಯವಿಲ್ಲ ಹೀಗಾಗಿ ಸಂಪೂರ್ಣ ಸಾವಯವ ಹಾಗೂ ಪರಿಸರಸ್ನೇಹಿ. ಕಡಿಮೆ ಉತ್ಪಾದನಾ ವೆಚ್ಚ ಮತ್ತು ಉತ್ತಮ ಇಳುವರಿ ಕಡಿಮೆ ಫಲವತ್ತತೆಯ ಭೂಮಿಯಲ್ಲಿ ಬೆಳೆಯುವುದು ಇದರ ಹೆಗ್ಗಳಿಕೆ ಸಿರಿಧಾನ್ಯ ಕಿರುಧಾನ್ಯ ಮತ್ತು ಧಾನ್ಯಗಳು ನಮ್ಮ ಪುರಾತನ ಆಹಾರವಾಗಿವೆ ಅತಿ ಹೆಚ್ಚಿನ ಪ್ರಮಾಣದ ನಾರು ಕ್ಯಾಲ್ಸಿಯಂ ಪ್ರೋಟೀನ್ ಗಳು ಹಾಗೂ ಖನಿಜಾಂಶಗಳನ್ನು ಹೊಂದಿ ಹೆಚ್ಚು ಪೋಸ್ಟಿಕವಾಗಿವೆ ಬೊಜ್ಜು ಹೃದಯದ ಕಾಯಿಲೆ ರಕ್ತದೊತ್ತಡ, ಮಧುಮೇಹದ ಅಪಾಯವನ್ನು ಕಡಿಮೆಗೊಳಿಸಿ ಮಾನವನ ಆರೋಗ್ಯ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಇತ್ತೀಚಿಗೆ ನಡೆದ ಕೃಷಿ ಮೇಳ ಒಂದರಲ್ಲಿ ಸಿರಿಧಾನ್ಯಗಳನ್ನು ಬಳಿಸಿ ಸಿದ್ಧಪಡಿಸಲಾದ ಉಡುಗೆ ತೊಟ್ಟ ಗೊಂಬೆಗಳು ಕಲಾಕೃತಿ ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿದ್ದವು.
ಹೊಸ್ಮನೆ ಮುತ್ತು