ಶ್ರೀ ವಿಷ್ಣು ಸಹಸ್ರನಾಮ ಭಾಗ 4

||ಶ್ರೀ ಗುರುಭ್ಯೋ ನಮಃ ಹರಿಃ ಓಂ||
ನಮಗೆ ಅನೇಕಬಾರಿ ವಿಚಿತ್ರವಾದ ತೊಂದರೆಯಾಗಿ ನೋವು ದುಃಖದ ತೀವ್ರತೆ ಜೀವನದಲ್ಲಿ ಜಿಗುಪ್ಸೆ ತರಬಹುದು. ರೋಗ-ರುಜಿನˌ ಆದಿವ್ಯಾದಿˌ ಸಾಲಗಾರರ ಬಾಧೆˌ ಆರ್ಥಿಕ ತೊಂದರೆˌ ಮಕ್ಕಳ ವಿದ್ಯಾಭ್ಯಾಸದಲ್ಲಿ ಹಿನ್ನಡೆˌ ಅಂದುಕೊಂಡ ಕೆಲಸ ಆಗದೇ ಇರುವುದುˌ ವೈವಾಹಿಕ ಜೀವನದ ಸಮಸ್ಯೆˌ ಪ್ರೀತಿಗಳಲ್ಲಿ ವೈಫಲ್ಯˌ ದಾಂಪತ್ಯದಲ್ಲಿ ಬಿರುಸುˌ ಗಂಡ-ಹೆಂಡಿರ ಮುನಿಸುˌ ಕೆಲಸದಲ್ಲಿ ಬಡ್ತಿ ದೊರಕದಿರುವುದು! ಉತ್ತಮ ಕೆಲಸ ದೊರೆಯದಿರುವುದುˌ ಕೆಟ್ಟ ಸ್ವಪ್ನಗಳುˌ ಶತ್ರು ಬಾಧೆˌ ಭಯ ಮುಂತಾದ ನಾನಾ ಸಮಸ್ಯೆಗಳು ನಮ್ಮ ಬದುಕಿನಲ್ಲಿ ಬರಬಹುದು. ಈ ಸಂದರ್ಭಗಳಲ್ಲಿ ನಾವು ಮಾಡುವ ಯಾವ ಪ್ರಯತ್ನಗಳು ಪ್ರಯತ್ನಗಳು ಕೈಗೂಡದೆ ಹೋದಾಗˌ ಸರ್ವಸಿದ್ಧಿ ಮಂತ್ರವಾದ ವಿಷ್ಣು ಸಹಸ್ರನಾಮ ರಾಮಬಾಣದಂತೆ ಆ ಸಮಸ್ಯೆಗಳನ್ನು ನಿವಾರಿಸುತ್ತದೆ. ದುಃಖ ದುಗುಡಗಳನ್ನು ಪರಿಹಾರ ಮಾಡಿ ಬದುಕಿಗೆ ಮತ್ತೆ ಸಂಭ್ರಮವನ್ನು ದೊರಕಿಸಿಕೊಡುತ್ತದೆ. ವಿಷ್ಣು ಸಹಸ್ರನಾಮದಲ್ಲಿ ಕೆಲವು ಶ್ಲೋಕಗಳ ಪಠಣˌ ಪಾರಾಯಣˌ ಅನೇಕ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ತಕ್ಷಣ ದೈವಾನುಗ್ರಹ ದೊರೆಯುವಷ್ಟು ಸಶಕ್ತವಾಗಿವೆ ಈ ಶ್ಲೋಕಗಳು. ಆದರೆ ಈ ಸಾಧ್ಯತೆಯ ಪ್ರಯೋಜನ ಪಡೆಯಬೇಕಾದರೆ ಯಾವ ಶ್ಲೋಕ ಯಾವ ಸಮಸ್ಯೆಗೆ ಪರಿಹಾರ ಎನ್ನುವುದು ಮುಖ್ಯವಾಗಿ ತಿಳಿದಿರಬೇಕು. ಮುಂದಿನ ಭಾಗದಲ್ಲಿ ಸಮಸ್ಯೆಗಳು ಹಾಗೂ ಅವುಗಳಿಗೆ ಪರಿಹಾರ ನೀಡಿ ತೊಂದರೆ ನಿವಾರಿಸಬಲ್ಲ ವಿಷ್ಣು ಸಹಸ್ರನಾಮದ ಶ್ಲೋಕಗಳನ್ನು ಹೇಳಲಾಗಿದೆ. ಇದನ್ನು ಪ್ರತಿನಿತ್ಯ ಕನಿಷ್ಠ 11 ಬಾರಿ ಪಾರಾಯಣ ಮಾಡಬೇಕು. ಅವಕಾಶ ದೊರೆತಾಗಲೆಲ್ಲ ಹೇಳುತ್ತಿದ್ದರೆ ಅನುಗ್ರಹ ಆಗುತ್ತದೆ. ಆದರೆ ಮಕ್ಕಳು ತುಂಬಾ ಚಿಕ್ಕವರಾದರೆ ಅವರ ಪರವಾಗಿ ತಂದೆ-ತಾಯಿಯರು ಹೇಳಬಹುದು. ಹಾಗೆಯೇ ತಂದೆ-ತಾಯಿಯರು ತುಂಬಾ ವೃದ್ಧರಾಗಿ ಹೇಳಲು ಅಸಮರ್ಥರಾದರೆ ಅವರ ಪರವಾಗಿ ಮಕ್ಕಳು ಶ್ಲೋಕವನ್ನು ಹೇಳಬಹುದು.
🙏🌷ನಾಹಂ ಕರ್ತಾ ಹರಿಃ ಕರ್ತಾ🌷🙏
(ಮುಂದುವರಿಯುವದು)

Leave a Reply