ಜಗತ್ತಿನ ಎಲ್ಲ ಜೀವಿಗಳಲ್ಲಿ ಮನುಷ್ಯನಿಗೆ ವಿಶಿಷ್ಟವಾದ ವರದಾನವಿದೆ, ಅದುವೇ ಮನುಷ್ಯನ ಬುದ್ದಿಶಕ್ತಿ.
ಮನುಷ್ಯನ ಹೊಸಶೋಧನೆಯ ತುಡಿತಕ್ಕೆ ಎಲ್ಲೆಯೇ ಇಲ್ಲ…. ಕಲ್ಲು ಕುಟ್ಟಿ ಬೆಂಕಿ ಹುಟ್ಟಿಸುವದರಿಂದ ಬೆಂಕಿಪೆಟ್ಟಿಗೆ, ಕುಟ್ಟಿ ಕುಟ್ಟಿ ಕಳುಹಿಸುವ ತಂತಿ ಸಂದೇಶದಿಂದ ಅಂತರ್ಜಾಲದ ತುರ್ತು ಸಂದೇಶಕ್ಕೆ ಮುಟ್ಟಿದೆ. ಮಹಾಭಾರತದಲ್ಲಿ ಸಂಜಯ ಅರಮನೆಯಲ್ಲಿ ಕುಳಿತು ಧ್ರುತರಾಷ್ಟ್ರನಿಗೆ ಯುದ್ಧದ ವರ್ಣನೆ ಮಾಡಿದನು, ಈಗ ನಾವು ದೂರದರ್ಶನದ ಸಂಜಯನ ಮುಖಾಂತರ ಭಾರತ-ಪಾಕಿಸ್ತಾನ ಗೂಟಾಟದ (ಕ್ರಿಕೆಟ್) ಯುದ್ಧ ನೋಡುತ್ತೇವೆ. ಮನುಷ್ಯ ತನ್ನ ಪ್ರತಿಯೊಂದು ಅವಶ್ಯಕತೆಗಳನ್ನು ಪೂರೈಸಲು ಶೋಧನೆಯ ಹಾದಿ ಹಿಡಿದಿದ್ದಾನೆ
ಶೋಧನೆಗಳು ಮತ್ತು ನಮ್ಮ ಜೀವನ – ಈ ಸರಣಿಯಲ್ಲಿ ಶೋಧನೆಗಳ ಬಗ್ಗೆ ಮತ್ತು ನಮ್ಮ ಜೀವನದ ಮೇಲೆ ಅದರ ಪ್ರಭಾವಗಳ ಬಗ್ಗೆ ಚರ್ಚಿಸೋಣ.
ಮೊದಲ ಸರಣಿಯಲ್ಲಿ ಒಂದು ಸಣ್ಣ ಶೋಧನೆಯ ಪರಿಣಾಮ ನೋಡೋಣ. ಕ್ಯಾಲ್ಕುಲೇಟರ್ ಅಥವಾ ಎಣಿಸುಕ ನಮ್ಮೆಲ್ಲರಿಗೆ ಗಣಿತದಲ್ಲಿ ಸಹಾಯ ಮಾಡಲು ತಂದ ಒಂದು ಸಣ್ಣ ಆವಿಷ್ಕಾರ, ಈಗಿನ ಗಣಕ ತಂತ್ರಜ್ಞಾನದ ಮುಂದೆ ಇದು ನಿಜವಾಗಿ ಸಣ್ಣದು. ವಿದ್ಯಾರ್ಥಿಗಳು, ವ್ಯಾಪಾರಿಗಳು,ಕಛೇರಿಗಳಲ್ಲಿ ಸಣ್ಣ ಕೂಡಿಸುವ ಲೆಕ್ಕದಿಂದ ಕಠಿಣ ಗಣಿತದ ಸಮಸ್ಯಗಳಿಗೆ ಎಣಿಸುಕ ಉಪಯೋಗಿಸುತ್ತಾರೆ.ಇದರ ಉಪಯೋಗ ಯಾವ ಹಂತಕ್ಕೆ ಮುಟ್ಟಿದೆಯೆಂದರೆ ತಿಂಗಳ ಹಾಲಿನ ಲೆಕ್ಕ, ಮನೆ ಸಾಮಾನು ಲೆಕ್ಕ ಮನಸ್ಸಿನ್ನಲ್ಲಿ ಮಾಡುವದು ಜನಕ್ಕೆ ಸಾದ್ಯವಿಲ್ಲ. ಇದೆ ರೀತಿ ಎಣಿಸುಕ ಉಪಯೋಗ ಮುಂದುವರೆದರೆ ನಮ್ಮ ಮೆದಳಿನ ಶಕ್ತಿ ಕ್ಷೀಣಿಸಿ ಒಂದು ಸಮಯದಲ್ಲಿ ನಾವು ಎಣಿಸುಕದ ಗುಲಾಮರಾಗುತ್ತೇವೆ.
ಈ ಸರಣಿ ಮುಗಿಸುವ ಮುನ್ನ ಒಂದು ಉದಾಹರಣೆ ನೋಡೋಣ,
ಮಂಗನಿಂದ ಮಾನವ, ಇದು ಎಲ್ಲರಿಗೂ ಗೊತ್ತು. ಮಂಗನಿಂದ ಮಾನವನ ರೂಪಾಂತರದ ಸಮಯದಲ್ಲಿ ಮನಷ್ಯನಿಗೆ ಆ ಹಂತದಲ್ಲಿ ಬಾಲವಿತ್ತು, ಆದರೆ ಅದರ ಉಪಯೋಗ ಮನುಷ್ಯನಿಗೆ ಇರದ ಕಾರಣ ಕ್ರಮೇಣ ಅದು ಮಾಯವಾಯಿತು. ಅದೇ ರೀತಿ ನಮ್ಮ ಮೆದಳಿನ ಶಕ್ತಿ ಕ್ರಮೇಣ ಮಾಯವಾಗುವುದು ಸಾಧ್ಯವಿದೆ ಎಂದು ಹೇಳುತ್ತಾ ನನ್ನ ಮೊದಲ ಸರಣಿಯ ಚರ್ಚೆ ಮುಗಿಸುತ್ತೇನೆ
2 Comments
ಚರ್ಚೆ ಎಂದಿರುವುದರಿಂದ ನನ್ನ ಅನಿಸಿಕೆಗಳಿವು:
೧. ಮನುಷ್ಯನ ಮೆದುಳು ಹೆಚ್ಚು ಹೆಚ್ಚು ಕ್ರಿಯಾಶೀಲವಾಗುತ್ತಿರುವುದರಿಂದ ಹೊಸ ಹೊಸ ಆವಿಷ್ಕಾರಗಳಾಗುತ್ತಿವೆ. ಮುಂದೊಮ್ಮೆ ಕೈಕಾಲುಗಳಿಗಿಂತ ಮೆದುಳಿನ ಕೆಲಸವೇ ಜಾಸ್ತಿಯಾಗಿ ಕೇವಲ ತಲೆ ಮತ್ತು ಬಾಲವಿರುವ ಜೀವಿಯಾಗಿ ಮಾನವಜೀವಿ ಪರಿವರ್ತಿತವಾಗಬಹದೇನೋ!
೨. ಮಂಗನಿಂದ ಮಾನವನಾದುದಾದರೆ ಮಂಗಗಳು ಈಗಲೂ ಏಕೆ ಇವೆ? ಪರಿವರ್ತನೆಯ ಹಂತದಲ್ಲಿರುವ ಮಂಗಗಳು ಈಗ ಕಾಣುತ್ತಿಲ್ಲವಲ್ಲವೇ? ಮಂಗಗಳು ಮಾನವನಿಗೆ ಸಮೀಪವಾದ ಜೀವಿಗಳೇ ಹೊರತು ಅವುಗಳು ಮಾನವರಾಗಿ ಪರಿವರ್ತಿತವಾಗಿರಲಾರವು ಎಂದು ಅನ್ನಿಸುತ್ತದೆ.
ಈ ಅನಿಸಿಕೆಗಳನ್ನು ಗಂಭೀರವಾಗಿಯಾಗಲೀ, ಆಕ್ಷೇಪಣೆಗಳೆಂದಾಗಲೀ ದಯಮಾಡಿ ಭಾವಿಸದೆ, ತಲೆಗೆ ಹೆಚ್ಚು ಕೆಲಸ ಕೊಡುವ ಸಲುವಾಗಿ ಎಂದು ಭಾವಿಸಲು ಕೋರುವೆ.
ಧನ್ಯವಾದಗಳು.
ನಾನು ನಿಮ್ಮ ಮೊದಲ ವಿಚಾರ ಒಪ್ಪುತ್ತೇನೆ, ಆದರೆ ಹೊಸ ಆವಿಷ್ಕಾರ ನಮ್ಮನ್ನು ಅವನತಿಗೆ ದೂಡದಿರಲಿ
ಮಂಗನಿಂದ ಮಾನವ…. ಮಾನವನಿಗೆ ಮೊದಲು ಮಂಗನ ರೂಪವಿತ್ತು, ಅದು ಕ್ರಮೇಣ ಬದಲಿ ಆಗುತ್ತಾ ಈಗಿನ ರೂಪ ಬಂದಿದೆ. ‘ಮಂಗನ ರೂಪದಿಂದ ಮಾನವ’ ಅನ್ನುವದರ ಬದಲು ಸರಳವಾಗಿ ಇದು ‘ಮಂಗನಿಂದ ಮಾನವ’ ಆಗಿರಬಹುದು.