ಸೆಕ್ಯುಲರ್ ಸೇನಾನಿ ಸುಭಾಷ್ಚಂದ್ರ ಬೋಸ್ ಲೇ: ಬಿ.ಎಂ. ಹನೀಫ್ ಪ್ರ: ಅನುವಾದ, ಬೆಂಗಳೂರು ಮೊ: 77603 50244 ಪುಟ: 72 ಬೆಲೆ: ₹50 ಅಪ್ಪಟ ದೇಶಪ್ರೇಮಿ ಸುಭಾಷರ ರಾಷ್ಟ್ರೀಯತೆಯ ಮತ್ತು ಸರ್ವಧರ್ಮ ಸಮಭಾವದ ಕುರಿತ ಅನೇಕ ವಿಚಾರಗಳನ್ನು ಈ ಕೃತಿಯಲ್ಲಿ ಲೇಖಕರು ಮೊಗೆದು ಕೊಟ್ಟಿದ್ದಾರೆ. ಗಾಂಧಿ ಮತ್ತು ಬೋಸ್ ನಡುವೆ ಎಂತಹ ಸಂಬಂಧವಿತ್ತೆನ್ನುವುದನ್ನು ಇದು ಹೊರಗೆಡವಿದೆ. ಬೋಸ್ ಅವರು ಎಮಿಲೀ ಶೆಂಕ್ಲ್ ಜತೆಗೆ ಪ್ರೇಮ ವಿವಾಹವನ್ನು ರಹಸ್ಯವಾಗಿ ಮಾಡಿಕೊಂಡಿದ್ದ ಕುತೂಹಲದ ಮಾಹಿತಿಯೂ ಇದೆ. ಇತಿಹಾಸದಲ್ಲಿ ಅಚ್ಚಳಿಯದ ಪ್ರಭಾವ ಬೀರಿದ ಪ್ರಮುಖ ನಾಯಕರಲ್ಲಿ ಒಬ್ಬರಾದ ಬೋಸ್ ಬಗ್ಗೆ ಮರು ಓದಿಗೂ ಹಚ್ಚುವಂತಿದೆ ಈ ಕೃತಿ. ಒಂಬತ್ತು ಅಧ್ಯಾಯಗಳಿದ್ದು, ಒಂದೇ ಗುಕ್ಕಿಗೆ ಓದಿ ಮುಗಿಸುವಂತಿದೆ.
courtsey:prajavani.net
https://www.prajavani.net/artculture/book-review/book-661750.html