ಸಾಪೇಕ್ಷತೆ ಸಿದ್ಧಾಂತ ಬೇರೊಂದು ದೃಷ್ಟಿಕೋನದಿಂದ ನೋಡಿದಾಗ …………..
ಪ್ರತಿಯೊಬ್ಬ ಮನುಷ್ಯನಿಗೆ ತನ್ನನ್ನು ಬಿಟ್ಟು ಬೇರೆಲ್ಲರೂ ಸಾಕಷ್ಟು ಹಣ ಗಳಿಸುತ್ತಿದ್ದಾರೆಂದು ಅಂದುಕೊಳ್ಳುತ್ತಾನೆ.
ಉದಾಹರಣೆಗೆ:
ರಾಮು ಶ್ಯಾಮುನನ್ನು ನೋಡಿದಾಗ – ಶ್ಯಾಮು ಹಣ ಗಳಿಸುತ್ತಿದ್ದಾನೆ ತಾನು ಹಣಗಳಿಸುತ್ತಿಲ್ಲ ಎಂದುಕೊಳ್ಳುತ್ತಾನೆ.
ಶ್ಯಾಮು ರಾಮುನನ್ನು ನೋಡಿದಾಗ – ರಾಮು ಹಣ ಗಳಿಸುತ್ತಿದ್ದಾನೆ ತಾನು ಹಣಗಳಿಸುತ್ತಿಲ್ಲ ಎಂದುಕೊಳ್ಳುತ್ತಾನೆ.
ರಾಮು ಹಣಗಳಿಸುವ ವೇಗ ಹೆಚ್ಚು ಆದರೆ ಅವನ ಖರ್ಚು ಹೆಚ್ಚಾಗಿ ಅವನಿಗೆ ತನ್ನ ಹಣಗಳಿಕೆ ವೇಗ ಸ್ತಬ್ಧವಾಗಿದೆ ಎನಿಸುತ್ತದೆ ಆದರೆ ಹೊರಗೆ ನಿಂತು ನೋಡುತ್ತಿರುವ ಶ್ಯಾಮುಗೆ ರಾಮು ಗಳಿಕೆ ವೇಗ ಗೊತ್ತಾಗುತ್ತದೆ.
ರಾಮು ಹಣಗಳಿಸುವ ವೇಗ ಬೆಳಕಿನ ವೇಗ ಮುಟ್ಟಿದರೆ ನಮ್ಮ ಅರ್ಥವ್ಯವಸ್ಥೆಗೆ ಅದನ್ನು ತಡೆದುಕೊಳ್ಳಲು ಅನಂತವಾದ ಶಕ್ತಿಬೇಕಾಗುತ್ತೆ
ಮುಕ್ತಾಯದ ಮಾತು: ನಿಜವಾದ ಸಂಗತಿ ಏನೆಂದರೆ ಪ್ರತಿಯೊಬ್ಬ ಮನುಷ್ಯನಿಗೆ ತಾನು ಹಣಗಳಿಸುತ್ತಿಲ್ಲ (ಸ್ತಬ್ಧ ಇದ್ದೇನೆ) ತನ್ನನು ಬಿಟ್ಟು ಬೇರೆಲ್ಲರೂ ಸಾಕಷ್ಟು ಹಣ ಗಳಿಸುತ್ತಿದ್ದಾರೆಂದು (ಚಲಿಸುತ್ತಿದ್ದಾರೆ) ಅಂದುಕೊಳ್ಳುತ್ತಾನೆ.
ಗಮನಿಸಿ: ನಾನು ಸಾಪೇಕ್ಷತೆ ಸಿದ್ಧಾಂತ (ನನಗೆ ಅರ್ಥ ಆದದ್ದನ್ನು) ಬೇರೊಂದು ದೃಷ್ಟಿಕೋನದಿಂದ ವಿವರಿಸಲು ಪ್ರಯತ್ನಿಸಿದ್ದೇನೆ, ಏನಾದರು ತಪ್ಪಾಗಿದ್ದರೆ ಕ್ಷಮಿಸಿ.
ಚಿತ್ರ: ಗೂಗಲ್
1 Comment
ಇದು ಸಾಮಾನ್ಯ ಅನುಭವ! ಇತರರನ್ನು ಮಾನದಂಡವಾಗಿ ಬಳಸಿ ನಮ್ಮನ್ನು ನಾವು ಅಳೆದುಕೊಳ್ಳುತ್ತೇವೆ. ನಾವೇ ಇತರರಿಗೆ ಮಾನದಂಡವಾದರೆ ಪ್ರಗತಿಯೆನ್ನಬಹುದು. ನಿರಪೇಕ್ಷತೆಯೇ ಸಾಪೇಕ್ಷತೆಗೆ ಉತ್ತರ! ಉತ್ತಮ ವಿಚಾರ ಪ್ರೇರಕ ಬರಹ.